ಸಿಬ್ಬಂದಿಯಿಂದಲೇ ಎಟಿಎಂಗೆ ತುಂಬಿಸಬೇಕಿದ್ದ ಹಣ ದರೋಡೆ; 1.37 ಕೋಟಿ ಲೂಟಿ

ಸಾಂದರ್ಭಿಕ ಚಿತ್ರ

ಬೆಂಗಳೂರು: ಎಟಿಎಂಗೆ ತುಂಬಿಸಲು ನೀಡಲಾಗಿದ್ದ 1 ಕೋಟಿಗೂ ಅಧಿಕ ಹಣ ವಂಚಿಸಿದ ಘಟನೆಗೆ ಸಂಬಂಧಿಸಿದಂತೆ ಕೋರಮಂಗಲ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

ಪೇಮೆಂಟ್ ಸರ್ವಿಸ್ ಕಂಪನಿಯೊಂದು ಕೆಲವು ಬ್ಯಾಂಕ್‌ಗಳ ಎಟಿಎಂ ಯಂತ್ರಗಳಿಗೆ ಹಣ ತುಂಬಿಸುವ ಪರವಾನಗಿ ಪಡೆದಿತ್ತು. ಆದರೆ ಈ‌ ಕೆಲಸ ಮಾಡುತ್ತಿದ್ದ ಪ್ರವೀಣ್, ಧನಶೇಖರ್, ರಾಮಕ್ಕ ಹಾಗೂ ಹರೀಶ್ ಕುಮಾರ್ ಎಂಬ ಆರೋಪಿಗಳು 57 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದೇ ಕಂಪನಿಯಲ್ಲಿದ್ದ ಹರೀಶ್ ಕುಮಾರ್, ಪ್ರವೀಣ್ ಕುಮಾರ್ ಹಾಗೂ ವರುಣ್ ಎಂಬ ಆರೋಪಿಗಳ ಮತ್ತೊಂದು ತಂಡ 80 ಲಕ್ಷ ರೂಪಾಯಿ ವಂಚಿಸಿದೆ ಎಂದು ಆರೋಪಿಸಲಾಗಿದೆ. ಕಂಪನಿಯ ಪ್ರತಿನಿಧಿಗಳು ನೀಡಿರುವ ದೂರಿನನ್ವಯ ಕೋರಮಂಗಲ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್‌ಗಳು ದಾಖಲಾಗಿವೆ.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

error: Content is protected !!