
ಸುರತ್ಕಲ್: ಎನ್.ಎಮ್.ಪಿ.ಎ ವತಿಯಿಂದ ಸುರತ್ಕಲ್ ಲಯನ್ಸ್ ಕ್ಲಬ್ ಮುಖಾಂತರ ಸುರತ್ಕಲ್ ಲಯನ್ಸ್ ಸ್ಪೇಷಲ್ ಸ್ಕೂಲ್ ಗೆ ಉಚಿತ ಬಸ್ಸಿನ ವ್ಯವಸ್ಥೆ ಮಾಡಿದ್ದು ಅದನ್ನು ಶಾಲೆಯ ಮುಖ್ಯ ಶಿಕ್ಷಕಿ ಸೌಮ್ಯ ದೇವಾಡಿಗ ಅವರಿಗೆ ಹಸ್ತಾಂತರಿಸಿ ಮಾತನಾಡಿದರು, ಎನ್.ಎಮ್.ಪಿ.ಎ ಸಂಸ್ಥೆಯು ಸಾಮಾಜಿಕ ಬದ್ಧತೆಯೊಂದಿಗೆ ಕೆಲಸ ಮಾಡುತ್ತಿದ್ದು ತನ್ನ ಮಾನವೀಯ ಕಳಕಳಿಯನ್ನು ತೋರಿಸುತ್ತದೆ. ಸಂಸ್ಥೆಯಿಂದ ಪರಿಸರದಲ್ಲಿ ಉತ್ತಮ ಕೆಲಸಗಳು ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಉದಾರ ಮನಸ್ಸಿನ ಸೇವೆಗೆ ದೇವರ ಆಶೀರ್ವಾದ ಯಾವಾಗಲೂ ಇರುತ್ತದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ್ ಶೆಣೈ ನುಡಿದರು.

ವೇದಿಕೆಯಲ್ಲಿ ಲಯನ್ ಜೀವನ್ ಬೆಳ್ಳಿಯಪ್ಪ, ವಿ.ಯು.ಸೈಮೊನ್, ಮೊಯಿದಿನ್, ಮೈಮೂನಾ, ಜೀವನ್, ಕೇಶವ ಸಾಲ್ಯಾನ್, ಜಯಂತ್ ಶೆಟ್ಟಿ, ಜಯೇಶ್ ಗೋವಿಂದ, ರಾಧಿಕಾ, ಶಾಲೆಯ ಶಿಕ್ಷಕಿ ಸುಕನ್ಯಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರತ್ಕಲ್ ಲಯನ್ಸ್ ಕ್ಲಬ್ ಅಧ್ಯಕ್ಷೆ ಶಶಿಕಲಾ ಶೆಟ್ಟಿ ವಹಿಸಿದ್ದರು.