ಅಂಡರ್‌ 19 ವಿಶ್ವಕಪ್‌ ಸೂಪರ್‌ ಸಿಕ್ಸ್‌ ಪಂದ್ಯ: ಇಂದು ಭಾರತ, ಜಿಂಬಾಬ್ವೆ ಮುಖಾಮುಖಿ

ಬುಲವಾಯೋ: ಅಂಡರ್‌ 19 ಏಕದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಸೂಪರ್‌ ಸಿಕ್ಸ್‌ ಹಂತಕ್ಕೆ ಪ್ರವೇಶಿರುವ ಭಾರತವು ಇಂದು ಗ್ರೂಪ್‌ 2ರ ತನ್ನ ಮೊದಲ ಸೂಪರ್‌ ಸಿಕ್ಸ್‌ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ವಿರುದ್ಧ ಕಣಕ್ಕಿಳಿಯಲಿದೆ.

ಗ್ರೂಪ್‌ ಹಂತದಲ್ಲಿ ಅಮೆರಿಕ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್‌ ವಿರುದ್ಧ ಗೆದ್ದಿದ್ದ ಭಾರತ ಅಜೇಯ ತಂಡವಾಗಿ ಸೂಪರ್ ಸಿಕ್ಸ್‌ಗೆ ಪ್ರವೇಶಿಸಿತ್ತು. ಜಿಂಬಾಬ್ವೆ 2ರಲ್ಲಿ ಸೋತು, 1 ಪಂದ್ಯ ರದ್ದಾದ ಕಾರಣ, ಸಿ ಗುಂಪಿನಲ್ಲಿ 3ನೇ ತಂಡವಾಗಿ ಸೂಪರ್‌ ಸಿಕ್ಸರ್‌ಗೆ ಪ್ರವೇಶಿಸಿತ್ತು.

error: Content is protected !!