ವಡೋದರಾ: ಇಂದಿನ ವುಮೆನ್ಸ್ ಪ್ರೀಮಿಯರ್ ಲೀಗ್ (WPL) ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಆರ್‌ಸಿಬಿ ಮುಖಾಮುಖಿಯಾಗಲಿವೆ. ಈ ಪಂದ್ಯವನ್ನು ಆರ್‌ಸಿಬಿ ಗೆದ್ದರೆ ಫೈನಲ್ ಗೆ ಪ್ರವೇಶ ಪಡೆದುಕೊಳ್ಳುತ್ತದೆ.

2024ರ ಚಾಂಪಿಯನ್ಸ್, ಸ್ಮೃತಿ ಮಂಧನಾ ನಾಯಕತ್ವದ ಆರ್‌ಸಿಬಿ ಈ ಆವೃತ್ತಿಯಲ್ಲಿ ಆರಂಭಿಕ 5 ಪಂದ್ಯಗಳನ್ನೂ ಗೆದ್ದು ಅಜೇಯ ಓಟ ನಡೆಸಿತ್ತಾದರೂ ಶನಿವಾರದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಶರಣಾಗಿತ್ತು. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಕೂಡ ಕಳೆದ ಮಂಗಳವಾರ ಡೆಲ್ಲಿ ವಿರುದ್ಧವೇ ಸೋತಿತ್ತು.


ಸದ್ಯ 6ರಲ್ಲಿ 5 ಗೆದ್ದು ಅಂಕಪಟ್ಟಿಯಲ್ಲಿ 10 ಅಂಕದೊಂದಿಗೆ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ, ಮುಂಬೈ ವಿರುದ್ಧ ಗೆದ್ದರೆ 12 ಅಂಕದೊಂದಿಗೆ ನೇರವಾಗಿ ಫೈನಲ್‌ಗೇರಲಿದೆ. ಯಾಕೆಂದರೆ ತಲಾ 6 ಅಂಕದೊಂದಿಗೆ 2, 3ನೇ ಸ್ಥಾನದಲ್ಲಿರುವ ಡೆಲ್ಲಿ, ಗುಜರಾತ್ ತಂಡಗಳು ಉಳಿದ 2 ಪಂದ್ಯಗಳನ್ನೂ ಗೆದ್ದರೂ 10ಗಳಷ್ಟೇ ಲಭಿಸಲಿದೆ.