ತುಳು ಚಿತ್ರರಂಗಕ್ಕೆ ‘ನಾನ್ ವೆಜ್’ ಟೇಸ್ಟ್: ಫೆ.6ರಿಂದ ಥಿಯೇಟರ್‌ಗಳಲ್ಲಿ ಭರ್ಜರಿ ಬಾಡೂಟ!

ಮಂಗಳೂರು: “ತುಳು ಸಿನಿಮಾರಂಗದಲ್ಲಿ ಹೊಸತನ ಇಲ್ಲ” ಅನ್ನೋ ಮಾತು ಮತ್ತೆ ಮತ್ತೆ ಕೇಳಿಸೋ ಸಮಯದಲ್ಲೇ, ಆ ಮಾತಿಗೆ ನೇರ ಉತ್ತರ ಕೊಡುವಂತೆ ‘ನಾನ್ ವೆಜ್’ ಸಿನಿಮಾ ಫೆಬ್ರವರಿ 6ರಿಂದ ನಿಮ್ಮ ನೆಚ್ಚಿನ ಚಿತ್ರಮಂದಿರಗಳಿಗೆ ಗ್ರಾಂಡ್ ಎಂಟ್ರಿ ಕೊಡ್ತಾ ಇದೆ. ಹೆಸರು ಕೇಳಿದ್ರೆ ಥ್ರಿಲ್ಲು, ವಿಷಯ ಕೇಳಿದ್ರೆ ಕುತೂಹಲ – ಕಚ್ಚಗುಳಿ… ಒಟ್ಟಾರೆ ಇದು ತುಳು ಚಿತ್ರರಂಗಕ್ಕೆ ಹೊಸ ಚೈತನ್ಯ ತುಂಬೋ ಪ್ರಯತ್ನ.

ಇತ್ತೀಚಿನ ವರ್ಷಗಳಲ್ಲಿ ತುಳು ಸಿನಿಮಾಗಳು ಪ್ರಯೋಗಾತ್ಮಕವಾಗಿ ಬಂದರೂ ಪ್ರೇಕ್ಷಕರವರೆಗೆ ತಲುಪೋದು ಕಷ್ಟವಾಗಿತ್ತು. ನಿರ್ಮಾಪಕರು ಬಂಡವಾಳ ಹೂಡೋದು ಯೋಚಿಸುವ ಸ್ಥಿತಿ. ಅಂಥ ಸಂದರ್ಭದಲ್ಲಿ ಕುಟುಂಬ ಸಮೇತ ಕೂತು ನೋಡಬಹುದಾದ, ಮನರಂಜನೆಯ ಭರ್ಜರಿ ಬಾಡೂಟ ಹಿಡಿದು ‘ನಾನ್ ವೆಜ್’ ಚಿತ್ರ ಥಿಯೇಟರ್‌ಗೆ ಬರುತ್ತಿದೆ.

ಹೆಸರೇನೋ ಸ್ವಲ್ಪ ಡಿಫರೆಂಟ್‌, ಆದರೆ ಕಥೆ, ನಿರೂಪಣೆ ಮತ್ತು ಹಾಸ್ಯದಲ್ಲಿ ಪ್ರೇಕ್ಷಕರನ್ನು ಹಿಡಿದು ಕೂರಿಸಬಲ್ಲ ಪ್ರಯತ್ನ ಮಾಡಲಾಗಿದೆ ಎನ್ನೋದು ಚಿತ್ರತಂಡದ ವಿಶ್ವಾಸ. ನೈಜ ಜೀವನದ ಸನ್ನಿವೇಶಗಳು, ತುಳು ಮಣ್ಣಿನ ವಾಸನೆ, ಮತ್ತು ಭರಪೂರ ಮನರಂಜನೆ –ಇದೆಲ್ಲದರ ಮಿಶ್ರಣವೇ ‘ನಾನ್ ವೆಜ್’.

ಒಟ್ಟಿನಲ್ಲಿ, “ತುಳು ಸಿನಿಮಾಗೆ ಪ್ರೇಕ್ಷಕರೇ ಇಲ್ಲ” ಅನ್ನೋ ಮಾತಿಗೆ ಪ್ರಶ್ನಾರ್ಥಕ ಚಿನ್ಹೆ ಹಾಕೋ ಸಿನಿಮಾ ಇದಾಗಬಹುದು ಅನ್ನೋ ನಿರೀಕ್ಷೆ ಚಿತ್ರರಂಗದಲ್ಲಿ ಮೂಡಿದೆ. ಫೆ.6ರಿಂದ ಶುರುವಾಗುವ ಈ ಬಾಡೂಟ, ಪ್ರೇಕ್ಷಕರಿಗೆ ಎಷ್ಟು ರುಚಿಸುತ್ತದೆ ಅನ್ನೋದು ಈಗ ಥಿಯೇಟರ್‌ಗಳಲ್ಲೇ ತೀರ್ಮಾನವಾಗಬೇಕು.

error: Content is protected !!