
ಬುಲವಾಯೊ: ಭಾರತ ಮತ್ತು ನ್ಯೂಜಿಲ್ಯಾಂಡ್ ಅಂಡರ್ 19 ಏಕದಿನ ವಿಶ್ವಕಪ್ ಕೂಟದ ಇಂದಿನ(ಜ.24) ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಬಿ ಗುಂಪಿನಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿರುವ ಭಾರತ, ಕಿವೀಸ್ ವಿರುದ್ಧವೂ ಗೆದ್ದರೆ ಅಜೇಯ ತಂಡವಾಗಿ ಲೀಗ್ ಸ್ಪರ್ಧೆ ಮುಗಿಸಲಿದೆ.

ಬಿ ಗುಂಪಿನಲ್ಲಿ ಭಾರತ ಮತ್ತು ಕಿವೀಸ್ ಈಗಾಗಲೇ ಸೂಪರ್ ಸಿಕ್ಸ್‌ಗೆ ಪ್ರವೇಶಿಸಿದ್ದು, ಭಾರತ ಅಗ್ರಸ್ಥಾನದಲ್ಲಿದೆ. ಮಳೆಯಿಂದಾಗಿ ಎರಡೂ ಪಂದ್ಯ ರದ್ದುಗೊಂಡ ಕಾರಣ ಕಿವೀಸ್ 3ನೇ ಸ್ಥಾನದಲ್ಲಿದ್ದು, ಬಾಂಗ್ಲಾ 2ನೇ ಸ್ಥಾನವನ್ನು ಪಡೆದುಕೊಂಡಿದೆ.


ಶುಕ್ರವಾರ(ಜ.23)ದ ಪಂದ್ಯದಲ್ಲಿ ಅಮೆರಿಕ ವಿರುದ್ಧ ಬಾಂಗ್ಲಾ, ಶ್ರೀಲಂಕಾ ವಿರುದ್ಧ ಆಸೀಸ್ ಜಯ ಸಾಧಿಸಿತು. ಇದರೊಂದಿಗೆ ಎಲ್ಲ ಗುಂಪುಗಳ ಸೂಪರ್ ಸಿಕ್ಸ್ ಅಂತಿಮ ಗೊಂಡಿದ್ದು, ರವಿವಾರದಿಂದ ಸೂಪರ್ ಸಿಕ್ಸ್ ಪಂದ್ಯಗಳು ಶುರುವಾಗಲಿವೆ.