ವಿಚ್ಚೇದನ ವಿವಾದದ ನಡುವೆ ಜಡ್ಜ್‌ ಮುಂದೆಯೇ ವಿಷ ಸೇವಿಸಿದ ಪತಿ- ಆಸ್ಪತ್ರೆಗೆ ಸಾಗಿಸಿದ ಪತ್ನಿ

ಮಂಗಳೂರು : ವಿಚ್ಚೇದನ ವಿವಾದದ ನಡುವೆ ವ್ಯಕ್ತಿಯೋರ್ವ ಜಡ್ಜ್ ಮುಂದೆಯೇ ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿ ಅಶ್ವಸ್ಥಗೊಂಡಿದ್ದು, ಈತನನ್ನು ಹೆಂಡತಿಯೇ ಅಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದ ಘಟನೆ ಪುತ್ತೂರಿನ 5ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ನಡೆದಿದೆ.

ಪುತ್ತೂರಿ ಕಾವು ಮಣಿಯಡ್ಕ ನಿವಾಸಿ ರವಿ (35) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ರವಿ ಹಾಗೂ ಆತನ ಪತ್ನಿ ವಿದ್ಯಾಶ್ರೀ ನಡುವೆ ಕಲಹ ನಡೆದಿತ್ತು. ಎರಡು ದಿನಗಳ ಹಿಂದೆ ವಿದ್ಯಾಶ್ರೀ ತನ್ನ ಗಂಡ ರವಿ ಡ ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿದ್ದಾಗಿ ಆರೋಪಿಸಿ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಳು.

ಸಂಪ್ಯ ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ಕೇಸ್‌ ದಾಖಲಾಗುವ ಮುನ್ನವೇ ಇಬ್ಬರ ನಡುವೆ ವಿಚ್ಛೇದನದ ಮಾತುಕತೆ ನಡೆದಿತ್ತು. ಇತ್ತ ಸಂಪ್ಯ ಠಾಣೆಗೆ ಹಾಜರಾಗಲು ರವಿಗೆ ತಿಳಿಸಿದ್ದರೆ ಅತ್ತ ಈತ ನೇರವಾಗಿ ಪುತ್ತೂರು ನ್ಯಾಯಾಲಯದ ಆವರಣಕ್ಕೆ ಬಂದು ಜಡ್ಜ್ ಮುಂದೆಯೇ ವಿಷ ಸೇವನೆ ಮಾಡಿದ್ದಾರೆ ಎನ್ನಲಾಗಿದೆ.

ವಿಷ ಸೇವನೆ ಬಳಿಕ ರವಿ ನ್ಯಾಯಾಲಯದಲ್ಲಿಯೇ ವಾಂತಿ ಮಾಡಿದ್ದು, ತಕ್ಷಣ ಎಚ್ಚೆತ್ತ ಅಲ್ಲಿನವರು ವ್ಯಕ್ತಿಯನ್ನು ಪುತ್ತೂರು ಸರ್ಕಾರಿ ಆಸ್ಪತ್ರಗೆ ರವಾನೆ ಮಾಡಲು ಸಿದ್ದತೆ ನಡೆಸುತ್ತಿದ್ದರು. ಗಂಡ ಒದ್ದಾಡುತ್ತಿರುವ ಸುದ್ದಿ ಕೇಳಿದ ಹೆಂಡತಿ ಕೂಡ ಕೋರ್ಟಿಗೆ ಬಂದಿದ್ದು, ಅಂಬ್ಯುಲೆನ್ಸ್‌ನಲ್ಲಿ ಗಂಡನ ಜೊತೆ ತೆರಳಿದ್ದಾರೆ ಎನ್ನಲಾಗಿದೆ.

ರವಿ ಗೇರು ತೋಟಕ್ಕೆ ಸಿಂಪಡಿಸುವ ಕರಾಟೆ ಎನ್ನುವ ಕೀಟನಾಶಕವನ್ನ ವ್ಯಕ್ತಿ ಸೇವಿಸಿದ್ದಾರೆ ಎನ್ನಲಾಗಿದೆ. ಎಂಡೋಸಲ್ಫಾನ್ ಬ್ಯಾನ್ ಆದ ಬಳಿಕ ಮಾರುಕಟ್ಟೆಯಲ್ಲಿ ಸಿಗುವ ‘ಕರಾಟೆ’ ಕೀಟನಾಶಕ ಇದೆಂದು ಹೇಳಲಾಗುತ್ತಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಕರಾಟೆ ಕೀಟನಾಶಕವನ್ನ‌ ಸೇವಿಸಿದ ರವಿ ಸ್ಥಿತಿ ಗಂಭೀರವಾಗಿದೆ. ರವಿಯನ್ನ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನಿಂದ ಮಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

error: Content is protected !!