ಗುರುಪುರ: ಹಿಂದೂ ಸಂಗಮ ಆಯೋಜನಾ ಸಮಿತಿ, ಗುರುಪುರ ತಾಲೂಕು – ಮಳಲಿ ಮಂಡಲದ ಆಶ್ರಯದಲ್ಲಿ ಕಿಲೆಂಜಾರು, ಬಡಗುಳಿಪಾಡಿ, ತೆಂಕುಳಿಪಾಡಿ, ಮೊಗರು, ಮುತ್ತೂರು ಹಾಗೂ ಕೊಳವೂರು ಗ್ರಾಮಗಳ ಸಹಯೋಗದಲ್ಲಿ ಹಿಂದೂ ಸಂಗಮ ಕಾರ್ಯಕ್ರಮವನ್ನು ಫೆಬ್ರವರಿ 1, 2026 (ಆದಿತ್ಯವಾರ) ಆಯೋಜಿಸಲಾಗಿದೆ.

ಈ ಪ್ರಯುಕ್ತ ಮಧ್ಯಾಹ್ನ ಗಂಟೆ 2.30ರಿಂದ ಶ್ರೀ ಮಹಾಗಣಪತಿ ದೇವಸ್ಥಾನ, ಗಂಜಿಮಠದಿಂದ “ವೈಭವದ ಶೋಭಾಯಾತ್ರೆ” ಹೊರಡಲಿದ್ದು, ಶೋಭಾಯಾತ್ರೆ ನಂತರ ನಾರಳ ಪದವಿನ ಅಳ್ವಾಸ್ ಮೈದಾನದಲ್ಲಿ ಸಮಾವೇಶ ನಡೆಯಲಿದೆ.

ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ.

ಶಾಂತಿ, ಶಿಸ್ತು ಮತ್ತು ಸೌಹಾರ್ದತೆಯಿಂದ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಆಯೋಜನಾ ಸಮಿತಿ ಮನವಿ ಮಾಡಿದೆ.
