ಮಂಗಳೂರು: ಕಾಂಗ್ರೆಸ್‌ನಿಂದ ಪರಿಶಿಷ್ಠರಿಗೆ, ಅಲ್ಪಸಂಖ್ಯಾತರಿಗೆ ಮುಖ್ಯವಾಗಿ ಬಡವರಿಗೆ ತೊಂದರೆ ಆಗಿಲ್ಲ. ಆದರೆ ಕಾಂಗ್ರೆಸ್‌ನಿಂದ ಜಮೀನ್ದಾರರಿಗೆ, ಬಂಡವಾಳ ಶಾಹಿಗಳಿಗೆ, ಭೂಮಾಲಕರಿಗೆ ತೊಂದರೆ ಆಗಿದೆ. ಆದರೆ ಆದರೆ ಬಿಜೆಪಿಯಿಂದ ಎಲ್ಲರಿಗೂ ತೊಂದರೆ ಆಗುದೆ. ಕೇಂದ್ರದ ಮೋದಿ ಸರ್ಕಾರ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಮಾರ್ಪಾಡು ಮಾಡುವ ಮೂಲಕ ಬಡವರಿಗೆ ಅನ್ಯಾಯ ಮಾಡಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದರು.



ಮನ್‌ರೇಗಾ ಯೋಜನೆಯ ಹೆಸರನ್ನು ತಿದ್ದುಪಡಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ದಕ ಜಿಲ್ಲಾ ಕಾಂಗ್ರೆಸ್ ವತಿಯಿಂದ, ಗಾಂಧಿ ಟೋಪಿ ಹಾಕಿ, ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದ ಬಳಿಯಿರುವ ರಾಜಾಜಿ ಪಾರ್ಕ್ ನ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ಉದ್ದೇಶಿಸಿ ಮಾತನಾಡುತ್ತಿದ್ದರು.
ಈ ಹಿಂದಿನ ಅವಧಿಯಲ್ಲೂ ಸಿದ್ದರಾಮಯ್ಯ ಸರ್ಕಾರ ಅದ್ಭುತ ಅಭಿವೃದ್ಧಿಯನ್ನು ಮಾಡಿತ್ತು. ಈಗ ಗ್ಯಾರಂಟಿ ಯೋಜನೆಗಳಿದ್ದರೂ ಸಮಗ್ರ ಅಭಿವೃದ್ಧಿ ಮಾಡಿದೆ. ಸರ್ಕಾರ ಪಕ್ಷತೀತವಾಗಿ ಎಲ್ಲ ಶಾಸಕರಿಗೂ ಸಮಾನ ಅನುದಾನ ಕೊಡಲಾರಂಭಸಿದೆ. ಅದೇ ನಿಧಿಯನ್ನು ಬಳಸಿಕೊಂಡ ಬಿಜೆಪಿ ಶಾಸಕರು ರಸ್ತೆ ಅಭಿವೃದ್ಧಿ ಮಾಡಿ ಬ್ಯಾನರ್ ಅಳವಡಿಸ್ತಿದ್ದಾರೆ. ಅವರು ಪ್ರಚಾರದಲ್ಲಿ ಮುಂದಿದ್ದಾರೆ. ನಮಗೆ ಪ್ರಚಾರ ಮುಖ್ಯವಲ್ಲ, ಬಡವರ ಕಲ್ಯಾಣ ಮುಖ್ಯ ಎಂದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾತಾಡಿ, “ಗ್ರಾಮೀಣ ಬಡವರ ಹೊಟ್ಟೆಗೆ ಯಾಕೆ ಹೊಡೆದಿರಿ? ಬಡವರನ್ನು ಯಾಕೆ ಬದುಕಲು ಬಿಡುತ್ತಿಲ್ಲ? ಬಡವರ ಮೇಲೆ, ದೇಶಕ್ಕಾಗಿ ತ್ಯಾಗ ಮಾಡಿದ ಗಾಂಧಿಯ ಮೇಲೆ ಯಾಗೆ ದ್ವೇಷ? ಗಾಂಧೀ ಹೆಸರು ನೋಡಲು ಸಹಿಸಲಾಗದೆ ಮನ್‌ರೇಗಾ ಹೆಸರನ್ನು ಬದಲಿಸಿದ್ದೀರಿ ಎಂದು ಪ್ರಶ್ನಿಸಿದರು ಮನ್‌ರೇಗಾ ಯೋಜನೆಯ ಮೂಲ ಉದ್ದೇಶವನ್ನು ಮರೆಮಾಚುವ ಮತ್ತು ಬಡವರ ಹಕ್ಕುಗಳ ಮೇಲೆ ರಾಜಕೀಯ ಒತ್ತಡದ ಪ್ರಯತ್ನವನ್ನು ಖಂಡಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತಾಡಿ, “ಮನ್‌ರೇಗಾ ಯೋಜನೆಯ ಮೂಲಕ ಲಕ್ಷಾಂತರ ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಮತ್ತು ಬದುಕಿನ ಭದ್ರತೆ ಒದಗಿದೆ. ಅದನ್ನು ಕೇವಲ ಹೆಸರಿನ ಬದಲಾವಣೆಯ ಮೂಲಕ ಬಡವರಿಗಾಗಿ ದೊರಕುವ ಹಕ್ಕನ್ನು ದುರ್ಬಲಗೊಳಿಸುವುದು ಸರಿಯಲ್ಲ. ಹಾಗಾಗಿ ಮನ್‌ರೇಗಾ ಹೆಸರಿನ ತಿದ್ದುಪಡಿಯನ್ನು ಕೇಂದ್ರ ಸರ್ಕಾರ ತಕ್ಷಣ ಹಿಂಪಡೆಯಬೇಕು ಮತ್ತು ಯೋಜನೆಯ ಮೂಲ ಉದ್ದೇಶವನ್ನು ಕಾಪಾಡಬೇಕು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ಪದ್ಮರಾಜ್, ಮಾಜಿ ಶಾಸಕ ಜೆ.ಆರ್.ಲೋಬೋ, ಅಪ್ಪಿ, ಅಶ್ರಫ್, ಶಶಿಧರ್ ಹೆಗ್ಡೆ, ನಝೀರ್ ಬಜಾಲ್, ಜಲೀಲ್ ಬದ್ರಿಯಾ ಮತ್ತಿತರರು ಉಪಸ್ಥಿತರಿದ್ದರು.