
ಬಜ್ಪೆ: ಕುಪ್ಪೆಪದವು ಸಮೀಪದ ನೂದೊಟ್ಟು ಬಳಿ ಮಾರುತಿ ಸುಜುಕಿ ಸ್ವಿಪ್ಟ್ ಡಿಸೈರ್ ಕಾರ್ ಬೆಂಕಿಗಾಹುತಿಯಾದ ಘಟನೆ ನಿನ್ನೆ(ಜ.20) ತಡರಾತ್ರಿ ನಡೆದಿದೆ.

ಎಡಪದವು ನಿವಾಸಿಗಳು ಕಾರಿನಲ್ಲಿ ಸಂಚರಿಸುತ್ತಿದ್ದರು ಎಂದು ಹೇಳಲಾಗಿದೆ. ಹೆಡ್ ಲೈಟ್ ನಲ್ಲಿ ತಾಂತ್ರಿಕ ದೋಷದಿಂದ ಕಾರ್ ಬೆಂಕಿಗೆ ಆಹುತಿಯಾಗಿದ್ದು ಅರ್ಧ ಭಾಗ ಸುಟ್ಟು ಕರಕಲಾಗಿದೆ. ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.

