ಮಂಗಳೂರು: ಅನ್ನದಾನ ಮಹಾದಾನ ಅಂತಹ ಅನ್ನವನ್ನು ಸಂಪಾದನೆ ಮಾಡುವಂತಹ ದಾನ ಬಹಳಷ್ಟು ಮಿಗಿಲಾದುದು ಮಹಿಳೆಯರು ತಮ್ಮ ಸಬಲೀಕರಣಕ್ಕಾಗಿ ಮತ್ತು ತಮ್ಮ ಕುಟುಂಬವನ್ನು ಮುನ್ನಡೆಸಲು ಬದುಕು ಹಸನಾಗಲು ಸಹಕಾರಿಯಾಗಿದೆ ಎಂದು ಎಂ.ಅರ್.ಪಿ.ಎಲ್ ಸಿ.ಎಸ್.ಅರ್ ವಿಭಾಗದ ಪ್ರಭಂದಕರಾದ ಕೇಶವ ಪಾಟಾಳಿ ನುಡಿದರು.

ಅವರು ಬಾಳ ಗ್ರಾಮ ಪಂಚಾಯತ್ ಸಮುದಾಯಭವನದಲ್ಲಿ ನಡೆದ ಜೆಸಿಐ ಗಣೇಶಪುರ ನಂದಿನಿ ವಲಯ ಎ ವಲಯ 15ರ ವತಿಯಿಂದ ಎಂ.ಅರ್.ಪಿ.ಎಲ್ ಸಿ.ಎಸ್.ಅರ್ ವಿಭಾಗದಿಂದ ತೀರಾ ಆರ್ಥಿಕವಾಗಿ ಹಿಂದುಳಿದ ಹೆಣ್ಣು 20 ಕುಟುಂಬಗಳಿಗೆ ಸುಮಾರು 3 ಲಕ್ಷ ವೆಚ್ಚದಲ್ಲಿ ಉಚಿತ ಹೊಲಿಗೆ ಮಿಷನ್ ನೀಡಿದ್ದು ಅದನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಿ ಮಾತನಾಡಿದರು.


ವೇದಿಕೆಯಲ್ಲಿ ವಲಯ ಉಪಾಧ್ಯಕ್ಷ ಜೆ, ಎಪ್ ಎಮ್ ಅರುಣ್ ಮಾಂಜ, ವಲಯ ನಿರ್ದೇಶಕ ಜೆ,ಎಪ್ ಡಿ ವಿಘ್ನೇಶ್ ಪ್ರಸಾದ್, ಜೆ.ಜೆ.ಸಿ ವಿಂಗ್ ವಲಯ ನಿರ್ದೇಶಕ ಸಿ.ಎ ಸನತ್ ಕುಮಾರ್ ನಾಯಕ್, ಜೆ.ಜೆ.ಸಿ ವಿನೀತ್, ಪೂರ್ವಾಧ್ಯಕ್ಷರುಗಳು, ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಗಣೇಶಪುರದ ಅಧ್ಯಕ್ಷ ಜೆ.ಎಪ್ ಎಂ ದೇವಿಚರಣ್ ಟಿ ಶೆಟ್ಟಿ ವಹಿಸಿದ್ದರು. ಕಾರ್ಯದರ್ಶಿ ಅಶ್ವತ್ ಧನ್ಯವಾದ ಸಮರ್ಪಿಸಿದರು.