
ಈ ವೀಕೆಂಡ್ ನಲ್ಲಿ ಮನೆಯಲ್ಲಿ ಎಗ್ ಫ್ರೈ ಮಾಡಿ ನೋಡಿ ಮನೆಮಂದಿಯೆಲ್ಲ ಖುಷಿ ಪಡುತ್ತಾರೆ.
ಎಗ್ ಫ್ರೈ ಮಾಡಲು ಯಾವೆಲ್ಲಾ ವಸ್ತು ಬೇಕು? ವಿಧಾನವೇನು ಎಂಬುದನ್ನು ಒಂದೊಂದಾಗಿ ತಿಳಿದುಕೊಳ್ಳೋಣ.
ಎಗ್ ಮಸಾಲ ಫ್ರೈ ಮಾಡಲು ಬೇಕಾಗುವ ವಸ್ತುಗಳು
ಮೊಟ್ಟೆ, ಸ್ವಲ್ಪ ಬೆಳ್ಳುಳ್ಳಿ, 1 ಈರುಳ್ಳಿ, 4 ಕರಿಬೇವು, ಖಾರದ ಪುಡಿ, ಅರಿಶಿನ ಪುಡಿ, ಗರಂ ಮಸಾಲ ಪುಡಿ, ದನಿಯಾ ಪುಡಿ, ಸಾಸಿವೆ, ಕೊತ್ತಂಬರಿ ಸೊಪ್ಪು, ಅಡುಗೆ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು
ಎಗ್ ಮಸಾಲ ಫ್ರೈ ಮಾಡುವ ವಿಧಾನವೇನು?
ಮೊದಲಿಗೆ ಗ್ಯಾಸ್ ನಲ್ಲಿ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಎಣ್ಣೆ ಕಾದ ಬಳಿಕ ಸಾಸಿವೆ, ಬೆಳ್ಳುಳ್ಳಿ, ಈರುಳ್ಳಿ, ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 2 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ ಕರಿಬೇವು ಸಹ ಹಾಕಿಕೊಂಡು ಬಳಿಕ ಖಾರದ ಪುಡಿ, ಅರಶಿಣ ಪುಡಿ, ಗರಂ ಮಸಾಲ, ಎಗ್ ಮಸಾಲ, ಧನಿಯಾ ಪುಡಿ, ಹಾಗೆ ಕಾಳು ಮೆಣಸಿನ ಪುಡಿ ಕೂಡ ನಿಮಗೆ ಬೇಕಿದ್ದರೆ ಹಾಕಿ. ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಫ್ರೈ ಮಾಡಿ. ಈಗ ಒಂದು ಬೌಲ್‌ಗೆ ಮೊಟ್ಟೆಯನ್ನು ಒಡೆದು ಇಟ್ಟುಕೊಳ್ಳಿ. ಆ ಮೊಟ್ಟೆಯನ್ನು ತೆಗೆದು ಈ ಬಾಣಲೆಗೆ ಹಾಕಿ ಒಮ್ಮೆ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ. 2 ನಿಮಿಷದ ಬಳಿಕ ಮುಚ್ಚಳ ತೆಗೆದು ಮೊಟ್ಟೆ ಸ್ವಲ್ಪ ಗಟ್ಟಿಯಾಗಿದ್ದರೆ ಸ್ವಲ್ಪ ಪುಡಿ ಮಾಡಿ ಮಿಕ್ಸ್ ಮಾಡಿಕೊಳ್ಳಿ. ಎಲ್ಲಾ ಮಸಾಲೆಗಳು ಮೊಟ್ಟೆಗೆ ಹಿಡಿಯುವಂತೆ ತಿರುಗಿಸಿಕೊಳ್ಳಿ. ಹಾಗೆ ಉರಿ ಹೆಚ್ಚಿಸಿಕೊಂಡು ತಿರುಗಿಸಿಕೊಳ್ಳಿ, ಹಾಗೆ ಬಹಳ ಒಣಗಿದ್ದರೆ ಸ್ವಲ್ಪವೇ ಸ್ವಲ್ಪ ನೀರು ಸಹ ಹಾಕಿಕೊಳ್ಳಬಹುದು. ಹಾಗೆ ಚೆನ್ನಾಗಿ ಫ್ರೈ ಆಗಲು ಬಿಡಿ. ನಂತರ ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಹೋಟೆಲ್ ಡಾಬಾ ರುಚಿಯ ಎಗ್ ಮಸಾಲ ಫ್ರೈ ರೆಡಿ.