
ಬೆಂಗಳೂರು: ಇಂದು ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿ ಅವರು ಭಾಗವಹಿಸಿ ಸಭಾ ನಾಯಕರಾದ ಬೋಸ್ ರಾಜು ಅವರೊಂದಿಗೆ 2026-27ನೇ ಸಾಲಿನ ಜನಸ್ನೇಹಿ ಬಜೆಟ್ ಪ್ರತಿಗಳನ್ನು ಪ್ರದರ್ಶಿಸುವ ಮೂಲಕ ರಾಜ್ಯದ ಜನತೆಗೆ ನೂತನ ಆರ್ಥಿಕ ವರ್ಷದ ಬಜೆಟ್ ಶುಭ ತರಲಿ ಎಂದು ಹಾರೈಸಿದರು.


ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರುಗಳಾದ ದಿನೇಶ್ ಗೂಳಿಗೌಡ ಸೇರಿದಂತೆ ಅನೇಕ ಶಾಸಕರು ಜೊತೆಗಿದ್ದರು.