ಡ್ರಗ್ಸ್ ಮಾಫಿಯಾ ಭೇದಿಸಿದ ಪೊಲೀಸ್ ಕಮಿಷನರ್‌ ಗೆ ದ.ಕ. ಬಸ್ಸು ಮಾಲಕರ ಸಂಘದಿಂದ ಅಭಿನಂದನೆ

ಮಂಗಳೂರು: ನಮ್ಮ ಜಿಲ್ಲೆಯಲ್ಲಿ ಮಾದಕ ದ್ರವ್ಯ ವ್ಯಸನಿಗಳನ್ನು ಹತೋಟಿಗೆ ತಂದು ಡ್ರಗ್ಸ್ ಮಾಫಿಯಾ ವಿರುದ್ಧ ಪ್ರಾಮಾಣಿಕವಾಗಿ ಹಾಗೂ ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸಿ ಡ್ರಗ್ಸ್ ಮಾಫಿಯಾದ ಹುಟ್ಟಡಗಿಸಿದ ಮಂಗಳೂರು ನಗರದ ದಕ್ಷ ಪೊಲೀಸ್ ಕಮೀಷನರ್ ರಾದ ಶ್ರೀ ಸುಧೀರ್ ಕುಮಾರ್ ರೆಡ್ಡಿ ಅವರನ್ನು ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘದ ಅಧ್ಯಕ್ಷರಾದ ಶ್ರೀ ಅಝೀಝ್ ಪರ್ತಿಪಾಡಿ ಹಾಗೂ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ರಾಮಚಂದ್ರ ಪಿಲಾರ್ ರವರು ಭೇಟಿಯಾಗಿ ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘದ ಪರವಾಗಿ ಅಭಿನಂದಿಸಿದರು.

ನಮ್ಮ ಜಿಲ್ಲೆಯ ಇತಿಹಾಸದಲ್ಲಿ ಬಹುಮಟ್ಟಿಗೆ ಡ್ರಗ್ಸ್ ಮಾಫಿಯಾವನ್ನು ನಿಯಂತ್ರಿಸಿರುವುದರ ಬಗ್ಗೆ ಮೆಚ್ಚುಗೆ ಸೂಚಿಸಿದರು. ಹಾಗೂ ಇದರ ವಿರುದ್ಧ ಪೊಲೀಸ್ ಇಲಾಖೆಗೆ ಸಹಕಾರದ ಸಂಪೂರ್ಣ ಭರವಸೆ ನೀಡಿದರು. ಹಾಗೂ ಮುಂದಿನವಾರ ಪೊಲೀಸ್ ಇಲಾಖೆ ಹಾಗೂ ರೋಶನಿ ನಿಲಯ ವಿದ್ಯಾಸಂಸ್ಥೆಯ ಸಹಯೋಗದೊಂದಿಗೆ ಮಂಗಳೂರು ಕೇಂದ್ರ ಬಸ್ ನಿಲ್ದಾಣ, ಲಾಲ್ ಬಾಗ್,ತೊಕ್ಕೊಟ್ಟು, ಉಳ್ಳಾಲ, ತಲಪಾಡಿ ಬಾರ್ಡರ್ ಬಸ್ ನಿಲ್ದಾಣಗಳಲ್ಲಿ ಮಾದಕ ದ್ರವ್ಯ ವಿರುದ್ಧ ಜನ ಜಾಗೃತಿ (ಬೀದಿ ನಾಟಕ) ಕಾರ್ಯಕ್ರಮವನ್ನು ಹಮ್ಮಿಕೊಂಡು ಎಲ್ಲಾ ಬಸ್ಸುಗಳಲ್ಲೂ ಸ್ಟಿಕ್ಕರ್ ಹಾಕಿಕೊಂಡು ಪ್ರಮುಖ ಕೇಂದ್ರಗಳಲ್ಲಿ ಫ್ಲೆಕ್ಸ್ ಹಾಕಿ ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘವು ಕಾರ್ಯಕ್ರಮವನ್ನು ಸಂಯೋಜಿಸುವುದೆಂದು ತಿಳಿಸಿದರು.

error: Content is protected !!