ಬೆಂಗಳೂರು: SSLC ಮುಖ್ಯ ಪರೀಕ್ಷೆಯ ಮುಂಚೆ 3 ಪ್ರಿಪರೇಟರಿಯನ್ನು ಶಿಕ್ಷಣ ಇಲಾಖೆ ನಡೆಸುತ್ತದೆ. ಈಗಾಗಲೇ ಒಂದು ಪ್ರಿಪರೇಟರಿ ಮುಕ್ತಾಯ ಆಗಿದ್ದು, ಈ ಹೊತ್ತಲ್ಲಿ ಮುಖ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆ ನನ್ನ ಬಳಿ ಇದೆ. ಪ್ರಶ್ನೆ ಪತ್ರಿಕೆ ಬೇಕಿದ್ರೆ DM ಮಾಡಿ ಅಂತ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ.

ಪ್ರಶ್ನೆ ಪತ್ರಿಕೆ ಸಿಗುತ್ತೆ ಅಂತ ಆದರೆ ಮಕ್ಕಳು ಏಕೆ ಓದಬೇಕು? ಪ್ರಶ್ನೆ ಪತ್ರಿಕೆ ಕಾಳಸಂತೆಯಲ್ಲಿ ಜೆರಾಕ್ಸ್ ಅಂಗಡಿ, ಸೈಬರ್ ಗಳಲ್ಲಿ ವಾಟ್ಸ್ಯಾಪ್ ಹಾಗೂ ಇತರೇ ಲಿಂಕ್ ಗಳಲ್ಲಿ ಕೇವಲ 50-60 ರೂಪಾಯಿಗೆ ಸಿಗುವಂತೆ ಆದರೆ ಏನಾಗುತ್ತೆ? ಮಕ್ಕಳು ಓದೋದನ್ನೇ ನಿಲ್ಲಿಸುತ್ತಾರೆ. ಇದರ ಪರಿಣಾಮ ಬಹಳ ಗಂಭೀರವಾಗಿರುತ್ತದೆ ಎಂದು ಕೃಪಾ ಶಾಲೆ & ಕಾಲೇಜು ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಎಚ್ಚರಿಕೆ ನೀಡಿದ್ದಾರೆ.

ಅನೇಕ ಮಕ್ಕಳ ಕೈಗೆ ಪ್ರಿಪರೇಟರಿ ಪ್ರಶ್ನೆ ಪತ್ರಿಕೆ ಸಿಕ್ಕಿದ್ದರಿಂದ ಮಕ್ಕಳು ಈ ಪೋಸ್ಟ್ ನೋಡಿ ಮುಖ್ಯ ಪರೀಕ್ಷೆಗೂ ಪ್ರಶ್ನೆ ಪತ್ರಿಕೆ ಸಿಗಬಹುದು ಅನ್ನೋ ನಂಬಿಕೆಯಲ್ಲಿ ದುಡ್ಡು ಕಳಿಸುವ ಸಾಧ್ಯತೆ ಇರುತ್ತದೆ. ಇದರಿಂದಾಗಿ SSLC ವಾರ್ಷಿಕ ಪರೀಕ್ಷೆ ಮೇಲೆ ಪರಿಣಾಮ ಬೀರುತ್ತದೆ ಎಂಬ ಆತಂಕವೂ ಇದೆ.

ಶಿಕ್ಷಣ ಸಚಿವರ ನೇತೃತ್ವದಲ್ಲಿ ಆದಷ್ಟು ಬೇಗ ಸಭೆ ಮಾಡಿ ಪ್ರಶ್ನೆ ಪತ್ರಿಕೆ ಲೀಕ್ ಆಗಲು ಕಾರಣ ಏನು? ಲೀಕ್ ಮಾಡಿದ್ಯಾರು? ಅನ್ನೋ ಬಗ್ಗೆ ಪತ್ತೆ ಹಚ್ಚಿ ಬಲಿ ಹಾಕ್ಬೇಕಿದೆ. ಇಲ್ಲದಿದ್ದರೆ ಅದರಿಂದಾಗುವ ಅನಾಹುತಕ್ಕೆ ಸರ್ಕಾರವೇ ನೇರಹೊಣೆ ಎನಿಸಿಕೊಳ್ಳುತ್ತದೆ.