ಸಿಸಿಎಲ್ 2026: ಜನವರಿ 16ರಿಂದ ತಾರೆಯರ ಕ್ರಿಕೆಟ್ ಹಬ್ಬ

CCL 2026: ಭಾರತದ ಬೇರೆ ಬೇರೆ ಚಿತ್ರರಂಗದವರೆಲ್ಲಾ ಸೇರಿ ಕ್ರಿಕೆಟ್ ಆಡುವ ಜೊತೆಗೆ ಪ್ರೇಕ್ಷಕರಿಗೆ ಮನೊರಂಜನೆ ಕೊಡುವುದೇ ಸಿಸಿಎಲ್. ಇದೀಗ ಸಿಸಿಎಲ್​​ನ 12ನೇ ಸೀಸನ್ ಪ್ರಾರಂಭ ಆಗುತ್ತಿದ್ದು, ವೇಳಾಪಟ್ಟಿ ಬಿಡುಗಡೆ ಆಗಿದೆ.

ಈ ಬಾರಿ ಸಹ 8 ತಂಡಗಳು ಸಿಸಿಎಲ್ ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಕರ್ನಾಟಕ ಬುಲ್ಡೋಜರ್ಸ್, ಚೆನ್ನೈ ಕಿಂಗ್ಸ್, ಕೇರಳ ಸ್ಟ್ರೈಕರ್ಸ್, ಮುಂಬೈ ಹೀರೋಸ್, ತೆಲುಗು ವಾರಿಯರ್ಸ್, ಭೋಜ್‌ಪುರಿ ಡಬ್ಬಂಗ್ಸ್, ಪಂಜಾಬ್ ಡಿ ಶೇರ್ ಮತ್ತು ಬೆಂಗಾಲ್ ಟೈಗರ್ಸ್ ತಂಡಗಳು ಕ್ರಿಕೆಟ್ ಆಡಿ ರಂಜಿಸಲಿದ್ದಾರೆ. ಕಳೆದ ವರ್ಷ ಪಂಜಾಬ್ ಡಿ ಶೇರ್ ತಂಡ ಚಾಂಪಿಯನ್ ಆಗಿತ್ತು. ಕರ್ನಾಟಕದಲ್ಲಿ ಸುದೀಪ್, ಡಾರ್ಲಿಂಗ್ ಕೃಷ್ಣ, ಗಣೇಶ್, ಜೆಕೆ, ಪೆಟ್ರೊಲ್ ಪ್ರಸನ್ನ ಇನ್ನೂ ಕೆಲವು ಅದ್ಭುತ ಆಟಗಾರರಿದ್ದಾರೆ.

2026ರ ಸಿಸಿಎಲ್ 16 ಜನವರಿಯಿಂದ ಪ್ರಾರಂಭ ಆಗಲಿದ್ದು ಫೆಬ್ರವರಿ 1ಕ್ಕೆ ಮುಕ್ತಾಯ ಆಗಲಿದೆ. ಮೊದಲ ಪಂದ್ಯ ಕರ್ನಾಟಕ ಬಿಲ್ಡೋಜರ್ಸ್ ಮತ್ತು ಪಂಜಾಬ್ ನಡುವೆ ಇರಲಿದೆ. ವೈಜಾಗ್, ಮಥುರ ಮತ್ತು ಹೈದರಾಬಾದ್​​​ನಲ್ಲಿ ಪಂದ್ಯಗಳು ನಡೆಯಲಿವೆ. ಪ್ರತಿ ತಂಡಗಳಿಗೆ ಆರಂಭಿಕ ಹಂತದಲ್ಲಿ ತಲಾ ಮೂರು ಪಂದ್ಯಗಳು ಇರಲಿವೆ. ಫೆಬ್ರವರಿ 1ರಂದು ಫೈನಲ್ ನಡೆಯಲಿದೆ.

error: Content is protected !!