ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ತುಪ್ಪದ ಪ್ರಸಾದ ಮಾರಾಟದಲ್ಲಿ ₹16 ಲಕ್ಷ ಅಕ್ರಮ ನಡೆದಿರುವ ಬಗ್ಗೆ ವರದಿಯಾಗಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಶಬರಿಮಲೆ ದೇವಾಲಯವನ್ನು ನಿರ್ವಹಿಸುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ತಿಳಿಸಿದೆ.

ತುಪ್ಪ ಮಾರಾಟಕ್ಕೆ ಸಂಬಂಧಿಸಿದಂತೆ ಯಾವುದೇ ಅಕ್ರಮ ನಡೆದಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ ಎಂದು ಟಿಡಿಬಿ ಅಧ್ಯಕ್ಷ ಕೆ. ಜಯಕುಮಾರ್ ಹೇಳಿದ್ದಾರೆ.


ಪ್ರಸ್ತುತ ತೀರ್ಥಯಾತ್ರೆಯ ವೇಳೆ ದೇವಸ್ಥಾನದ ಕೌಂಟರ್‌ಗಳ ಮೂಲಕ ಭಕ್ತರಿಗೆ ತುಪ್ಪದ ಪ್ರಸಾದ ಮಾರಾಟ ಮಾಡಲಾಗುತ್ತಿದೆ. ಪ್ರಸಾದ ಮಾರಾಟದಿಂದ ಬಂದಿರುವ ಹಣ ಮತ್ತು ಮಾರಾಟವಾದ ಒಟ್ಟು ಪ್ಯಾಕೆಟ್‌ಗಳಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದೂ ಮೂಲಗಳು ವಿವರಿಸಿವೆ.