ಚಾಲಕನ ನಿಯಂತ್ರಣ ತಪ್ಪಿ ಪ್ರಯಾಣಿಕರ ತಂಗುದಾಣಕ್ಕೆ ಲಾರಿ ಡಿಕ್ಕಿ!

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಹಿಂಬದಿಗೆ ಚಲಿಸಿ ರಸ್ತೆ ಬದಿಯ ಪ್ರಯಾಣಿಕರ ತಂಗುದಾಣಕ್ಕೆ ಗುದ್ದಿ ತಂಗುದಾಣ ನಜ್ಜುಗುಜ್ಜುಗೊಂಡಿದ್ದು, ಬಸ್ಸಿಗಾಗಿ ಕಾಯುತ್ತಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡ ಘಟನೆ ಸುಳ್ಯ ಸಮೀಪದ ಪೈಚಾರಿನಲ್ಲಿ ಸಂಭವಿಸಿದೆ.

ಪೈಚಾರಿನಿಂದ ಸೋಣಂಗೇರಿ ಕಡೆಗೆ ತಿರುಗುವಲ್ಲಿ ರಸ್ತೆ ಬದಿಯಲ್ಲಿ ಲಾರಿ ಚಾಲಕ ಲಾರಿ ನಿಲ್ಲಿಸಿ ತಿಂಡಿ ತಿನ್ನಲು ಹೋಟೆಲ್ ಗೆ ಹೋಗಿದ್ದರು. ಬಳಿಕ ಬಂದು ಲಾರಿಯನ್ನು ಚಾಲನೆ ಮಾಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಏಕಾಏಕಿ ಹಿಂಭಾಗಕ್ಕೆ ಚಲಿಸಿ ರಭಸವಾಗಿ ಬಂದು ತಂಗುದಾಣಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಬಸ್ಸಿಗಾಗಿ ಕಾಯುತ್ತಿದ್ದ ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಾಯಗೊಂಡವರನ್ನು ಲಾರಿಯ ಚಾಲಕನೇ ಸುಳ್ಯ ಆಸ್ಪತ್ರೆಗೆ ಅವರನ್ನು ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಡಿಕ್ಕಿಯ ರಭಸಕ್ಕೆ ಬಸ್ ತಂಗುದಾಣ ಸಂಪೂರ್ಣ ಜಖಂಗೊಂಡಿದೆ.

error: Content is protected !!