ಮಂಗಳೂರು: ‘ಶ್ರೀ ಕಾಶೀ ಮಠ ರಸ್ತೆ’ ನಾಮಫಲಕ ಉದ್ಘಾಟಿಸಿದ ಶಾಸಕ ಭರತ್‌ ಶೆಟ್ಟಿ

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣ ರಸ್ತೆ ವ್ಯಾಪ್ತಿಯ ಪದವಿನಂಗಡಿ ವೆಂಕಟರಮಣ–ಮಹಾಲಸಾ ದೇವಸ್ಥಾನ ಮುಂಭಾಗದ ರಸ್ತೆಗೆ ‘ಶ್ರೀ ಕಾಶೀ ಮಠ ರಸ್ತೆ’ ಎಂಬ ನಾಮಫಲಕವನ್ನು ಇಂದು ವಿದ್ಯುಕ್ತವಾಗಿ ಲೋಕಾರ್ಪಣೆ ಮಾಡಲಾಯಿತು. ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ನಾಮಫಲಕವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಹಾಗೂ ವೆಂಕಟರಮಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವೇದವ್ಯಾಸ ಕಾಮತ್ ಶುಭಾಶಂಸನೆ ಸಲ್ಲಿಸಿದರು. ವೆಂಕಟರಮಣ–ಮಹಾಲಸಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಾಸುದೇವ್ ಕಾಮತ್, ಕಸ್ತೂರಿ ಸದಾಶಿವ ಪೈ ಹಾಗೂ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟರಿ, ಮಾಜಿ ಮೇಯರ್‌ಗಳಾದ ದಿವಾಕರ್, ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ, ಜಯಾನಂದ ಅಂಚನ್, ಮನೋಜ್ ಕುಮಾರ್, ಮಾಜಿ ಉಪ ಮೇಯರ್ ಸುಮಂಗಲ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಲೋಹಿತ್ ಅಮೀನ್, ಮನೋಹರ್ ಶೆಟ್ಟಿ, ಶರತ್, ವೀಣಾ ಮಂಗಳ, ಮಹಾನಗರ ಪಾಲಿಕೆ ಸದಸ್ಯರಾದ ಸಂಗೀತಾ ನಾಯಕ್, ಗಾಯತ್ರಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಇದೇ ವೇಳೆ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ಗೆಳೆಯರ ಬಳಗದ ಸದಸ್ಯರು, ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷರು, ನವಚೇತನ ಫ್ರೆಂಡ್ಸ್ ಕ್ಲಬ್ ಸದಸ್ಯರು, ದೇವಸ್ಥಾನದ ಯುವಕ ಹಾಗೂ ಮಹಿಳಾ ವೃಂದದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವೆಂಕಟರಮಣ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಶಾಂತ್ ಪೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಉಪಾಧ್ಯಕ್ಷೆ ಪೂಜಾ ಪೈ ಧನ್ಯವಾದ ಅರ್ಪಿಸಿದರು.

error: Content is protected !!