ಉಪ್ಪಿನಂಗಡಿ: ಕಜೆಕ್ಕಾರ್ ಗುಡ್ಡ ಎಂಬಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ನಡೆಸಲಾಗುತ್ತಿದ್ದ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ ಮೂರು ಕೋಳಿ, ಮೂರು ದ್ವಿಚಕ್ರವಾಹನಗಳ ಸಹಿತ ಓರ್ವನನ್ನು ಬಂಧಿಸಿದ್ದಾರೆ.

ಉರುವಾಲು ಗ್ರಾಮದ ನೋಣಯ್ಯ ಮುಗೇರ ಬಂಧಿತ ವ್ಯಕ್ತಿ.


ಬಂಧಿತನಿಂದ ಕೋಳಿ ಅಂಕಕ್ಕೆ ಬಳಸಲಾಗುತ್ತಿರುವ ಸಲಕರಣೆಗಳನ್ನು ಜೂಜಿಗೆ ಬಳಸಲಾಗಿದ್ದ ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.