ರಸ್ತೆ ಬದಿ ತಡೆಬೇಲಿಗೆ ಬೈಕ್ ಡಿಕ್ಕಿ; ಸವಾರ ಮೃತ್ಯು

ಸುಳ್ಯ: ಆಲೆಟ್ಟಿ ಗ್ರಾಮದ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅರಂಬೂರಿನಲ್ಲಿ ಬೈಕ್ ಅಪಘಾತವಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಸುಳ್ಯದ ನಿವಾಸಿ ಸಲ್ಮಾನ್ ಬೈಕ್ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ .

ಸೋಮವಾರ(ಡಿ.5) ಮಧ್ಯಾಹ್ನ ಅಪಘಾತ ನಡೆದಿದ್ದು, ಬೈಕ್ ಚಲಾಯಿಸಿಕೊಂಡು ಅರಂಬೂರು ರಸ್ತೆಯಲ್ಲಿ ಹೋಗುತಿದ್ದಾಗ ರಸ್ತೆ ಬದಿ ತಡೆಬೇಲಿಗೆ ಗುದ್ದಿ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಪರಿಣಾಮ ಬೈಕ್ ಪಲ್ಟಿಯಾಗಿ ಸಲ್ಮಾನ್ ಅವರ ತಲೆ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

error: Content is protected !!