ಡಾ. ಅಣ್ಣಯ್ಯ ಕುಲಾಲ್‌ರಿಗೆ ರಾಜ್ಯಸಭಾ ಸ್ಥಾನ ನೀಡಬೇಕು: ಅಖಿಲ ಭಾರತ ಕುಂಬಾರರ ಮಹಾಸಭೆಯ ಆಗ್ರಹ

ಮಂಗಳೂರು: ಮಂಗಳೂರಿನಲ್ಲಿ ನಡೆದ ಕುಲಾಲ–ಕುಂಬಾರ ಯುವಜನ ಮತ್ತು ಮಹಿಳಾ ಸಮಾವೇಶದಲ್ಲಿ, ಕುಂಬಾರರ ಸಾಂಪ್ರದಾಯಿಕ ಕಸುಬು ಹಾಗೂ ಸಮುದಾಯದ ಆರ್ಥಿಕಾಭಿವೃದ್ಧಿಗೆ ಪೂರಕವಾಗಿದ್ದ ‘ಕುಂಭ ನಿಗಮ’ ಮರುಸ್ಥಾಪಿಸಬೇಕೆಂದು ಅಖಿಲ ಭಾರತ ಕುಂಬಾರರ ಮಹಾಸಭೆ ಸರ್ಕಾರವನ್ನು ಒತ್ತಾಯಿಸಿದೆ. ಜೊತೆಗೆ ಕುಲಾಲ–ಕುಂಬಾರ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಮನವಿ ಸಲ್ಲಿಸಲಾಯಿತು.

ಅಲ್ಲದೆ ಸಮುದಾಯದ ಪ್ರಮುಖರಾಗಿ ಗುರುತಿಸಲ್ಪಟ್ಟ ಕುಲಾಲ ಕುಂಬಾರ ಸಮುದಾಯದ ಶಿವರಾಮ ಕಾರಂತ, ಕರಾವಳಿಯ ಲಕ್ಷ್ಮೀಸಾಗರ್ ಖ್ಯಾತಿಯ ಶಿಕ್ಷಣ ತಜ್ಞ, ವೈದ್ಯ ಸಂಘಟಕ ಸಾಹಿತಿ ವಾಗ್ಮಿ, ಸಮಾಜ ವಿಜ್ಞಾನಿ ಡಾ. ಅಣ್ಣಯ್ಯ ಕುಲಾಲ್ ಅವರನ್ನು ರಾಜ್ಯಸಭೆಗೆ ಅಥವಾ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಬೇಕೆಂದು ಹಕ್ಕೊತ್ತಾಯ ಮಂಡಿಸಲಾಯಿತು.

ಡಾ. ಅಣ್ಣಯ್ಯ ಕುಲಾಲ್ ಅವರ ಸಾಮಾಜಿಕ ಸೇವೆ, ಶಿಕ್ಷಣ ಕ್ಷೇತ್ರದ ಕೊಡುಗೆ ಹಾಗೂ ಸಮುದಾಯದ ಪರವಾದ ಚಿಂತನೆಗಳು ರಾಜ್ಯಮಟ್ಟದ ಪ್ರತಿನಿಧಿತ್ವಕ್ಕೆ ಯೋಗ್ಯವೆಂದು ಅವರು ಅಭಿಪ್ರಾಯಪಟ್ಟರು. ಅಖಿಲ ಭಾರತ ಕುಂಬಾರರ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಿವ ಕುಮಾರ್ ಚೌಡ ಶೆಟ್ಟಿ ಹಾಗೂ ರಾಜ್ಯ ಅಧ್ಯಕ್ಷರಾದ ನಿತ್ಯಾಭರಣ ಸಿ. ಶೆಟ್ಟಿ ಹಕ್ಕೊತ್ತಾಯ ಮಂಡಿಸಿದರು.

error: Content is protected !!