ಉಡುಪಿ ಭೀಮಾ ಜ್ಯುವೆಲರ್ಸ್ ನಿಂದ ಪೊಲೀಸ್ ಇಲಾಖೆಗೆ ಬೊಲೆರೋ ಜೀಪ್ ಕೊಡುಗೆ

ಉಡುಪಿ: “ಭೀಮಾ ಜ್ಯುವೆಲರ್ಸ್” ತಮ್ಮ ಸಿಎಸ್‌ಆರ್ ನಿಧಿ ಯೋಜನೆ ಅಡಿಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಪೊಲೀಸ್ ಕಾರ್ಯಾಚರಣೆಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಮಹೇಂದ್ರ ಕಂಪನಿಯ ಬೊಲೆರೋ ಜೀಪನ್ನು ಕೊಡುಗೆಯಾಗಿ ಹಸ್ತಾಂತರಿಸಲಾಗಿದೆ.

ಗುರುವಾರ(ಜ.1) ನಡೆದ ಕಾರ್ಯಕ್ರಮದಲ್ಲಿ, ಭೀಮಾ ಜ್ಯುವೆಲರ್ಸ್ ಉಡುಪಿ ಇದರ ಸೇಲ್ಸ್ ಮತ್ತು ಆಪರೇಷನ್ಸ್ ಮುಖ್ಯಸ್ಥರಾದ ಗುರುಪ್ರಸಾದ್ ಅವರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್ ಅವರಿಗೆ ಜೀಪಿನ ಕೀಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಎಸ್. ನಾಯ್ಕ, ಉಡುಪಿ ಉಪವಿಭಾಗದ ಡಿವೈಎಸ್‌ಪಿ ಪ್ರಭು ಡಿ.ಟಿ., ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇನ್ಸ್‌ಪೆಕ್ಟರ್ ರವಿಕುಮಾರ್ ಹಾಗೂ ಪೊಲೀಸ್ ಇಲಾಖೆಯ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಭೀಮಾ ಜ್ಯುವೆಲರ್ಸ್ ಉಡುಪಿ ಇದರ ಶಾಖಾ ಮ್ಯಾನೇಜರ್ ಆಶಿಶ್, ಡೆಪ್ಯುಟಿ ಮ್ಯಾನೇಜರ್ ಸುಧೀರ್ ಶೆಟ್ಟಿ, ಅಸಿಸ್ಟೆಂಟ್ ಮ್ಯಾನೇಜರ್ ಪ್ರಸನ್ನ ಕುಮಾರ್, ಮಾರ್ಕೆಟಿಂಗ್ ಡಿಪಾರ್ಟ್ಮೆಂಟ್‌ನ ಮಂಜುನಾಥ್ ಅಮೀನ್, ಸೇಲ್ಸ್ ಮತ್ತು ಆಪರೇಷನ್ಸ್ ಹೆಡ್ ರಾಘವೇಂದ್ರ ಭಟ್ ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

ಜಿಲ್ಲೆಯ ಪೊಲೀಸ್ ಮೂಲಸೌಕರ್ಯವನ್ನು ಬಲಪಡಿಸಲು ಮತ್ತು ಸಾರ್ವಜನಿಕ ಸುರಕ್ಷತಾ ಕಾರ್ಯಗಳಿಗೆ ಸಹಕರಿಸಿದ ಭೀಮಾ ಜ್ಯುವೆಲರ್ಸ್‌ನ ಈ ಕಾರ್ಯವನ್ನು ಪೊಲೀಸ್ ಇಲಾಖೆ ಶ್ಲಾಘಿಸಿದೆ.

error: Content is protected !!