ಅಂಗರಗುಡ್ಡೆಯಲ್ಲಿ ಕಂಬಳ ಕೋಣ ಮಾಲಕನ ಸುಲಿಗೆ ಯತ್ನ; ತಂದೆ ಮೇಲೆ ಹಲ್ಲೆ – ಶಾಂತಿ ಕಾಪಾಡಿದ ನೆರೆಹೊರೆಯವರು

ಮುಲ್ಕಿ: ಮುಲ್ಕಿ ವ್ಯಾಪ್ತಿಯ ಅಂಗರ ಗುಡ್ಡೆಯಲ್ಲಿ ಕಂಬಳದ ಕೋಣಗಳ ಮಾಲಿಕನ ಸುಲಿಗೆ ಯತ್ನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ನೆರೆಯ ಹಳ್ಳಿಯಿಂದ ಬಂದ ಮೂವರು ಆರೋಪಿಗಳು ಕಂಬಳ ಕೋಣ ಮಾಲಕ ಅಬು ಬಕರ್ ಎಂಬವರನ್ನು ಸುಲಿಗೆ ಮಾಡಲು ಯತ್ನಿಸಿದ್ದು, ಈ ವೇಳೆ ಇವರ ಶಂಶುದ್ದೀನ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಗಲಾಟೆ ಉಲ್ಬಣಿಸುತ್ತಿದ್ದಂತೆ ನೆರೆಹೊರೆಯವರು ಧಾವಿಸಿ ಶಾಂತಿ ಕಾಪಾಡಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತ ವಿಡಿಯೋ ವೈರಲ್‌ ಆಗಿದ್ದು, ಮಂಗಳೂರು ಪೊಲೀಸ್‌ ಕಮಿಷನರ್‌ ಈ ಬಗ್ಗೆ ತನಿಖೆ ನಡೆಯುತ್ತಿರುವುದಾಗಿ ಹೇಳಿದ್ದು, ಪ್ರಕರಣದ ಅಸಲಿಯತ್‌ ಬಹಿರಂಗಪಡಿಸಿದ್ದಾರೆ.

ವೈರಲ್‌ ವಿಡಿಯೋದ ಸ್ಕ್ರೀನ್‌ ಶಾಟ್

ಅಬು ಬಕರ್ ಅವರ ಬಳಿ ಮೂರು ಜೋಡಿ ಕೋಣಗಳು, ಐದು ಹಾಲು ಕೊಡುವ ಹಸುಗಳು ಸೇರಿದಂತೆ ಸಾಕಷ್ಟು ಪಶು ಸಂಪತ್ತು ಇವೆ. ಇತ್ತೀಚೆಗೆ ಅವರ ಕೋಣಗಳು ಕಂಬಳ ಸ್ಪರ್ಧೆಯಲ್ಲಿ ಬಹುಮಾನ ಗೆದ್ದಿರುವುದು ಆರೋಪಿಗಳ ಗಮನ ಸೆಳೆದಿತ್ತು ಈ ಹಿನ್ನೆಲೆಯಲ್ಲಿ ಆರೋಪಿಗಳು ಬಂದಿದ್ದರು ಎನ್ನಲಾಗುತ್ತಿದೆ. ಸುಲಿಗೆ ಪ್ರಕ್ರಿಯೆಯ ವೇಳೆ ನಡೆದ ಗಲಾಟೆಯಲ್ಲಿ ಶಂಶುದ್ದೀನ್ ಗಾಯಗೊಂಡಿದ್ದು, ಪುತ್ರ ಅಬು ಬಕರ್ ಅವರನ್ನು ರಕ್ಷಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದಾಗಿ ಆಯುಕ್ತರು ಮಾಹಿತಿ ನೀಡಿದ್ದಾರೆ..

ಘಟನೆಯ ಬಳಿಕ ಗ್ರಾಮದಲ್ಲಿ ಹಿಂದೂ–ಮುಸ್ಲಿಂ ಸಮುದಾಯದವರು ಶಾಂತಿಯುತವಾಗಿ ಒಟ್ಟಿಗೆ ವಾಸಿಸುತ್ತಿರುವುದನ್ನು ಸ್ಪಷ್ಟಪಡಿಸುವಂತೆ, ನೆರೆಹೊರೆಯ ಹಿಂದೂ ಕುಟುಂಬಗಳು ಅಬು ಬಕರ್ ಕುಟುಂಬಕ್ಕೆ ಬೆಂಬಲವಾಗಿ ಧಾವಿಸಿದ್ದಾರೆ. ಈ ಮೂಲಕ ಪರಿಸ್ಥಿತಿ ತೀವ್ರಗೊಳ್ಳದಂತೆ ಗ್ರಾಮಸ್ಥರು ಸಹಕರಿಸಿದ್ದಾರೆ.

ಅಬು ಬಕರ್ ಕುಟುಂಬದವರು ಠಾಣೆಗೆ ದೂರು ನೀಡಿದ್ದು, ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಲಿದೆ. ಮೂವರು ಆರೋಪಿಗಳ ಪೈಕಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಮತ್ತೊಬ್ಬನು ತಲೆಮರೆಸಿಕೊಂಡಿದ್ದಾನೆ. ಎಂದಿನಂತೆ ಆರೋಪಿಗಳಲ್ಲೊಬ್ಬನು ತಾನು ಬಲಿಪಶು ಎನ್ನುವ ಉದ್ದೇಶದಿಂದ ಆಸ್ಪತ್ರೆಗೆ ತೆರಳಿ ಎಂಎಲ್‌ಸಿ ಮಾಡಿಸಿಕೊಂಡಿರುವುದು ಗಮನಕ್ಕೆ ಬಂದಿರುವಾಗಿ ಅವರು ಮಾಹಿತಿ ನೀಡಿದ್ದಾರೆ.

ಘಟನೆಯ ಕೆಲ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗಿದ್ದು, ಅವುಗಳ ಪರಿಶೀಲನೆಯಿಂದ ಘಟನೆ ಕುರಿತು ಸ್ಪಷ್ಟತೆ ದೊರೆಯುತ್ತಿದೆ. ಎಲ್ಲಾ ವೀಡಿಯೊಗಳನ್ನು ಪರಿಶೀಲಿಸಿದ ಬಳಿಕ ಇನ್ನಷ್ಟು ವಿಚಾರಗಳು ಹೊರಬರುವ ಸಾಧ್ಯತೆ ಇದ್ದು, ಅದರಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್‌ ಸುಧೀರ್‌ ರೆಡ್ಡಿ ತಿಳಿಸಿದ್ದಾರೆ.

ಇಬ್ಬರು ಆರೋಪಿಗಳ ವಿರುದ್ಧ ಈ ಹಿಂದೆಯೇ ಗಂಭೀರ ಸ್ವರೂಪದ ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದ್ದಾಗಿ ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

error: Content is protected !!