ಮಂಗಳೂರು: ಬಿಎಂಆರ್ ಗ್ರೂಪ್ ಕಳೆದ ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಅತ್ಯಂತ ಹಳೆಯ ಗ್ರೂಪ್ ಆಗಿದ್ದು, ಅಷ್ಟು ವರ್ಷಗಳ ಸೇವೆಯಲ್ಲಿ ಒಮ್ಮೆಯೂ ಯಾವ ಗ್ರಾಹರಿಗೂ ಅನ್ಯಾಯ ಮಾಡಿಲ್ಲ. ಮುಂದೆಯೂ ಆಗಲು ಸಾಧ್ಯವಿಲ್ಲ. ಅನುಮಾನವಿದ್ದರೂ ಸಂಸ್ಥೆಯನ್ನು ನೇರವಾಗಿ ಸಂಪರ್ಕಿಸುವಂತೆ ಸಂಸ್ಥೆಯ ದಾವೂದ್ ಹಕೀಮ್ ಸ್ಪಷ್ಟಪಡಿಸಿದ್ದಾರೆ.

ಬಿಎಂಆರ್ ಲಕ್ಕಿ ಸ್ಕೀಂ ಮುಳುಗಡೆಯಾಗಲಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವದಂತಿ ಹಬ್ಬಿರುವ ಬೆನ್ನಲ್ಲೇ ಗ್ರಾಹಕರು ಕಂಗಾಲಾಗಿದ್ದರು. ಆದರೆ ಬಿಎಂಆರ್ ಸಂಸ್ಥೆ ಸ್ಪಷ್ಟೀಕರಣ ನೀಡಿದ್ದು, ಗ್ರಾಹಕರು ಮೊಗದಲ್ಲಿ ಮಂದಹಾಸ ಮೂಡಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ದಾವೂದ್ ಹಕೀಮ್, ಸುರತ್ಕಲ್, ಕಾಟಿಪಳ್ಳ, ಕೃಷ್ಣಾಪುರ ಪರಿಸರದಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಬಿಎಂಆರ್ ಗ್ರೂಪ್ ಅತ್ಯಂತ ಹಳೆಯ ಗ್ರೂಪ್ ಆಗಿದ್ದು, ಗ್ರಾಹಕರ ನಂಬಿಕೆಗೆ ದ್ರೋಹ ಮಾಡುವ ಕೆಲಸ ಸಂಸ್ಥೆ ಎಂದೂ ಮಾಡುವುದಿಲ್ಲ. ಈಗಾಗಲೇ 15 ಸಾವಿರ ಗ್ರಾಹಕ ಕೂಪನ್‌ಗಳಲ್ಲಿ 12 ಸಾವಿರ ಕೂಪನ್ ದಾರರಿಗೆ ಅವರ ಆಯ್ಕೆಯ ವಸ್ತುಗಳನ್ನು ನೀಡಿದೆ. ಉಳಿದ 3 ಸಾವಿರ ಕೂಪನ್ ಗ್ರಾಹಕರಿಗೆ ವಿತರಿಸುವ ಕಾರ್ಯ ನಡೆಯುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಉಳಿದ ಎಲ್ಲಾ ಗ್ರಾಹಕರಿಗೆ ಕರೆ ಮಾಡಿ ಸ್ಕೀಮ್ ನಲ್ಲಿ ತಿಳಿಸಿದ ಉಡುಗೊರೆ ನೀಡಿ ಗ್ರಾಹಕರ ನಂಬಿಕೆ ಉಳಿಸುವ ಕಾರ್ಯ ಮಾಡಲಿದೆ ಎಂದು ಸಂಸ್ಥೆ ಮುಖ್ಯಸ್ಥರು ತಿಳಿಸಿದರು.
ಗ್ರಾಹಕರು ಯಾವುದೇ ರೀತಿಯಲ್ಲಿ ಭಯಪಡುವ ಅಗತ್ಯವಿಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವದಂತಿಗಳಿಗೆ ಕಿವಿಕೊಡಬೇಡಿ. ಯಾವುದೇ ಆತಂಕ, ಅನುಮಾನ ಬೇಡ, ಬಿಎಂಆರ್ ಗ್ರೂಪ್ ಕಳೆದ ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಅತ್ಯಂತ ಹಳೆಯ ಗ್ರೂಪ್ ಆಗಿದೆ. ಅಷ್ಟು ವರ್ಷಗಳ ಸೇವೆಯಲ್ಲಿ ಒಮ್ಮೆಯೂ ಗ್ರಾಹರಿಗೆ ಅನ್ಯಾಯವಾಗಿಲ್ಲ. ಮುಂದೆಯೂ ಆಗಲು ಸಾಧ್ಯವಿಲ್ಲ. ಅನುಮಾನವಿದ್ದರೂ ಸಂಸ್ಥೆಯನ್ನು ನೇರವಾಗಿ ಸಂಪರ್ಕಿಸುವಂತೆ ದಾವೂದ್ ಹಕೀಮ್ ಅವರು ಸ್ಪಷ್ಟಪಡಿಸಿದ್ದಾರೆ.