ಕೋಗಿಲು ಲೇಯೌಟ್‌ ಪ್ರಕರಣ: ಜಮೀರ್‌ ಆಂಡ್‌ ಗ್ಯಾಂಗ್‌ ವಲಸಿಗರನ್ನು ಕರೆಸಿಕೊಂಡಿದೆ- ಭರತ್‌ ಶೆಟ್ಟಿ ಗಂಭೀರ ಆರೋಪ

 

ಮಂಗಳೂರು: ಕೋಗಿಲು ಲೇಯೌಟ್‌ನ‌ 2023ರ ಗೂಗಲ್‌ ಮ್ಯಾಪನ್ನು ರಿವರ್ಸ್‌ ಹಾಕಿ ನೋಡಿದ್ರೆ 2023ರಲ್ಲಿ ಈ ರೀತಿ ಅಕ್ರಮವಾಗಿ ಮನೆ ಕಟ್ಟಿಕೊಂಡು ಕೂತ ಒಂದೇ ಒಂದು ಮನೆ ಕಾಣ್ತಾ ಇಲ್ಲ. ಈಗ ನೋಡಿದ್ರೆ ಆ ಎಲ್ಲ ಜಾಗವನ್ನು ವಲಸಿಗರಯ ಕವರ್‌ ಮಾಡಿರುವುದು ಕಾಣ್ತಾ ಇದೆ. 2023 ಕಾಂಗ್ರೆಸ್‌ ಸರ್ಕಾರ ಬಂದ್ಮೇಲೆ ಓಟ್‌ ಬ್ಯಾಂಕಿಗಾಗಿ ವ್ಯವಸ್ಥಿತವಾಗಿ ಜಮೀರ್‌ ಅಹ್ಮದ್‌ ಹಾಗೂ ಗ್ಯಾಂಗ್‌ ಅವರನ್ನು ಇಲ್ಲಿಗೆ ಕರೆತಂದು ಕೂರಿಸಿದೆ. ಇದೀಗ ಅವರಿಗೆ ಹೊಸತಾಗಿ ಮನೆಗಳನ್ನು ಕಟ್ಟಿಸಿಕೊಡಲು ಉದ್ದೇಶಪೂರ್ವಕವಾಗಿ ತೆರವುಗೊಳಿಸಿ ಮತ್ತೊಂದು ಕಡೆ ಮನೆಗಳನ್ನು ಕಟ್ಟಿಸಿ ಕೊಡುತ್ತಿದ್ದಾರೆ. ಅವರು ಬಾಂಗ್ಲಾದಿಂದ ಬಂದಿದ್ದಾರಾ? ಹೊರರಾಜ್ಯದಿಂದ ಬಂದಿದ್ದಾರಾ? ಒಂದೂ ಗೊತ್ತಿಲ್ಲ ಎಂದು ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್‌ ಶೆಟ್ಟಿ ಕಿಡಿಕಾರಿದ್ದಾರೆ.

ಮಂಗಳೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ವೆರಿಫಿಕೇಷನ್‌ ಕೂಡ ಮಾಡದೆ, ತಕ್ಷಣದಿಂದ ಮನೆಗಳನ್ನು ಒದಗಿಸುವುದು ಎಷ್ಟು ಸರಿ? ಅಕ್ರಮವಾಗಿ ಕೂತವರಿಗೆ ಮನೆ ಕಟ್ಟಿಕೊಡುವ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮಾಡ್ತಾ ಇದೆ. ಕರ್ನಾಟಕದಲ್ಲಿ ಅಕ್ರಮ ಒತ್ತುವರಿ ಮಾಡಿದ ಸಾವಿರಾರು ಮನೆಗಳಿದ್ದರೂ ಅವರ್ಯಾರಿಗೂ ಮನೆ ಕಟ್ಟಿಸಿಕೊಡುವ ಕೆಲಸ ಮಾಡಿಲ್ಲ. ಕೇರಳದಿಂದ ಬಂದಿರುವ ಮುಸ್ಲಿಮರ ಮನೆಗಳಿವೆ ಎನ್ನುವ ಕಾರಣಕ್ಕೆ ಕೇರಳದ ರಾಜಕೀಯ ಒತ್ತಡದಿಂದಾಗಿ ಅವರಿಗೆ ತೆರವುಗೊಳಿಸಿದ ಹತ್ತಿರದಲ್ಲಿಯೇ ಎಲ್ಲರಿಗೂ ಮನೆ ಕಟ್ಟಿಕೊಡುವ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮಾಡ್ತಾ ಇದೆ. ನಮ್ಮ ರಾಜ್ಯದ ಬಡವರು ಮನೆಗಳನ್ನು ಕೇಳಿಕೊಂಡು ಬರ್ತಾ ಇದ್ದರೂ ಎರಡೂವರೆ ವರ್ಷಗಳಿಂದ ಯಾರಿಗೂ ಮನೆಯನ್ನು ಸರ್ಕಾರ ಕೊಟ್ಟಿಲ್ಲ. ನನ್ನ ಕ್ಷೇತ್ರದಲ್ಲಿಯೇ 13 ಗ್ರಾಮ ಪಂಚಾಯತ್‌ಗಳಲ್ಲಿ ತುಂಬಾ ಒತ್ತಡ ಹಾಕಿ ಜಾಗವನ್ನು ತೋರಿಸಿಕೊಟ್ಟರೂ ಸರ್ಕಾರದಿಂದ ಯಾವುದೇ ಫಂಡ್‌ ರಿಲೀಸ್‌ ಆಗ್ತಾ ಇಲ್ಲ ಎಂದು ಆರೋಪಿಸಿದರು.

ನಾವೆಲ್ಲ ಬೆಂಗಳೂರಿಗೆ ಹೋದ್ರೆ ಒಳ್ಳೇದು ಅಂತ ವಲಸಿಗರು ಹೇಳೋದನ್ನು ನಾವು ವಿಡಿಯೋದಲ್ಲಿ ಕೇಳಬಹುದು. ಸಿದ್ದರಾಮಯ್ನಯವರು ಮೂಡ ಸೈಟ್‌ನಲ್ಲಿ ನಾವು ಟೆಂಟ್‌ ಹಾಕಿ ಕೂತ್ರೆ ನಮಗೆ ಬೇರೆ ಮನೆ ಕಟ್ಟಿಸಿಕೊಡ್ತಾರಾ? ಡಿಕೆಶಿ, ಜಮೀರ್‌ ಆಸತಿಯಲ್ಲಿ ಕೂತ್ರೆ ಬೇರೆ ಮನೆ ಕೊಡ್ತಾರಾ? ಸರ್ಕಾರದ ಜಾಗ ಪಬ್ಲಿಕ್‌ ಪ್ರಾಪರ್ಟಿ ಹಾಗೆ ಯಾರ್ಯಾರಿಗೋ ಕೊಡಲು ಸಾಧ್ಯವಾ? ಓಟ್‌ ಬ್ಯಾಂಕಿಗೋಸ್ಕರ ಮುಸ್ಲಿಮರ ನಾಲ್ಕು ಸಾವಿರ ಓಟಿಗಾಗಿ ಹೀಗೆ ಮಾಡುವುದು ಸರಿಯಾ ಎಂದು ಭರತ್‌ ಪ್ರಶ್ನಿಸಿದರು.

ಮನೆಯನ್ನು ಒನ್‌ ಟೈಂ ಮೆಜರ್‌ನಲ್ಲಿ ಕಟ್ಟಲಾಗುತ್ತಿದೆ ಇನ್ನು ಮುಂದೆ ಅಕ್ರಮ ಜಾಗದಲ್ಲಿ ಮನೆ ಕಟ್ಟಿ ತೆರವು ಆದಾಗ ಮನೆ ಕಟ್ಟಿಸಿಕೊಡುವುದಿಲ್ಲ, ಹಿಂದೆ ಅಕ್ರಮ ತೆರವುಗೊಂಡು ಮನೆ ಕಳೆದುಕೊಂಡವರಿಗೂ ಈ ರೂಲ್ಸ್‌ ಅನ್ವಯಿಸಲ್ಲ ಅನ್ತಾ ಇದ್ದಾರೆ. ಹಾಗಾದರೆ ಕರ್ನಾಟಕದ ಜನತೆಗೆ ಯಾಕೆ ಅನ್ಯಾಯ ಮಾಡ್ತಾ ಇದ್ದಾರೆ? ಕೇರಳದ ರಾಜಕಾರಣಿಗಳು ಸೋಷಿಯಲ್‌ ಮೀಡಿಯಾದಲ್ಲಿ ಬಾಯಿಗೆ ಬಂದಹಾಗೆ ಮಾತಾಡ್ತಾ, ʻ ಗಾಜಾ ಸ್ಟ್ರಿಪ್‌ ಆಫ್‌ ಕರ್ನಾಟಕʼ ಅಂತ ಹೇಳಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಝಮೀರ್‌ ಅಹ್ಮದ್‌ ಇದನ್ನು ಕೇಳಿಯೂ ಕೈ ಕಟ್ಟಿಕೊಂಡು ತಲೆ ಆಡಿಸ್ತಾ ಇದ್ದಾರೆ. ವೇಣುಗೋಪಾಲ್‌ ಅವರ ಪ್ರೆಷರ್‌ ಇದೆ ಎನ್ನುವ ಕಾರಣಕ್ಕಾಗಿ ಇವರು ಸಂಪೂರ್ಣವಾಗಿ ತನ್ನ ನಿಲುವನ್ನೇ ಬದಲಿಸಿದ್ದಾರೆ. ಕೇರಳದ ಭೂಕುಸಿತ ಆದ್ರೆ ಕಾಣ್ತದೆ. ಇಲ್ಲಿನ ಮಣ್ಣಿನ ಮಕ್ಕಳನ್ನು ಸರ್ಕಾರ ಕಡೆಗಣಿಸ್ತಾ ಇದ್ದಾರೆ, ಕರ್ನಾಟಕದ ಜನತೆಗೆ ಕ್ಷಮಿಸಲಾರದ ಅನ್ಯಾಯವನ್ನು ಕಾಂಗ್ರೆಸ್‌ ಮಾಡಿದೆ ಎಂದು ಆರೋಪಿಸಿದರು.

ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ವಲಸಿಗರು ಎಲ್ಲಿಯವರು, ಇಲ್ಲಿ ಬಂದು ನೆಲೆಸಿದ ಕಾರಣ ಸೇರಿ ಸಮಗ್ರ ತನಿಖೆಯಾಗಬೇಕು. ಇದಕ್ಕಾಗಿ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಇದೇ ವೇಳೆ ಒತ್ತಾಯಿಸಿದರು.

error: Content is protected !!