ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಹಾಗೂ ತಾಯಿ ರತ್ನಪ್ರಭಾ ಕೋರ್ಟ್ ಗೆ ಹಾಜರಾಗಿದ್ದು, ಇಂದು(ಡಿ.30) ದರ್ಶನ್ ಪರ ವಕೀಲರಿಂದ ಅವರಿಗೆ ಕ್ರಾಸ್ ಎಕ್ಸಾಮಿನೇಷನ್ ನಡೆಯಲಿದೆ.

ಸೋಮವಾರ(ಡಿ.29) ಪವಿತ್ರಗೌಡ ಪರ ವಕೀಲ ಬಾಲನ್ ರಿಂದ ಕ್ರಾಸ್ ಎಕ್ಸಾಮಿನ್ ನಡೆದಿದ್ದು, ಇಂದು ದರ್ಶನ್ ಪರ ವಕೀಲ ಸಿವಿ ನಾಗೇಶ್ ರಿಂದ ಕ್ರಾಸ್ ಎಕ್ಸಾಮಿನೇಷನ್ ನಡೆಯಲಿದೆ.
11:30ಕ್ಕೆ ವಿಚಾರಣೆ ಶುರುವಾಗಿದ್ದು, ಬಹುತೇಕ ಇವತ್ತಿಗೆ ಈ ಇಬ್ಬರು ಸಾಕ್ಷಿಗಳ ವಿಚಾರಣೆ ಮುಗಿಯೋ ಸಾಧ್ಯ ಇದೆ ಎನ್ನಲಾಗ್ತಿದೆ. ಹೀಗಾಗಲೇ ಕೋರ್ಟ್ ಹಾಲ್ ಗೆ ಎರಡೂ ಕಡೆ ವಕೀಲರು ಆಗಮಿಸಿದ್ದು, ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ಕೂಡ ಹಾಜರಾಗಿದ್ದಾರೆ. ಹಾಗೆಯೇ ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್ ಹಾಗೂ ಪವಿತ್ರಗೌಡ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದಾರೆ. ಉಳಿದ ಆರೋಪಿಗಳು ಖುದ್ದು ಕೋರ್ಟ್ ಗೆ ಹಾಜರಾಗಲಿದ್ದಾರೆ.