ಬೆಂಗಳೂರು: ಜನಪ್ರಿಯ ಕನ್ನಡ ಹಾಗೂ ತಮಿಳು ಟಿವಿ ಧಾರಾವಾಹಿಗಳ ನಟಿ ನಂದಿನಿ ಸಿಎಂ (26) ಅವರ ಬದುಕು ನಿಶ್ಯಬ್ದವಾಗಿದೆ. ಬೆಂಗಳೂರಿನಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಮೈಲಸಂದ್ರದ ವಾಸಸ್ಥಳದಲ್ಲಿ ಶವವಾಗಿ ಪತ್ತೆಹಚ್ಚಲ್ಪಟ್ಟಿದ್ದು, ಜನರು ಶಾಕ್ ಆಗಿದ್ದಾರೆ. ಅಷ್ಟಕ್ಕೂ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಸ್ಥಳದಲ್ಲಿ ಸಿಕ್ಕ ಡೆತ್ ನೋಟ್ / ಡೈರಿ ಪತ್ತೆಯಾಗಿದ್ದು, ಇದರಲ್ಲಿ ನಂದಿನಿ ಸಾವಿನ ಹಿಂದಿನ ಕಾರಣವನ್ನು ಉಲ್ಲೇಖಿಸಿದ್ದಾರೆ. ಅದರಲ್ಲಿ ತಮ್ಮ ವೈಯಕ್ತಿಕ ಒತ್ತಡ, ಕುಟುಂಬ ಒತ್ತಡ ಮತ್ತು ವೃತ್ತಿ ಸಮಸ್ಯೆಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಪೋಷಕರು ವಿವಾಹಕ್ಕೆ ಒತ್ತಡ ಹಾಕುತ್ತಿದ್ದಾರೆ. ತನ್ನ ಹೃದಯದಂತೆ ನಿರ್ಧಾರ ತೆಗೆದುಕೊಳ್ಳಲು ಅವಕಾಶ ಇಲ್ಲ. ವೃತ್ತಿ ಜೀವನ ಮುಂದುವರಿಸಲು ಇಚ್ಛೆ ಇದ್ದರೂ, ಬದುಕಿನಲ್ಲಿ ಬೆಳಕು ಕಾಣಲಿಲ್ಲʼ ಎಂಬಂತೆ ಅವರು ಬರೆದಿದ್ದಾರೆ.
ಅದ್ಭುತ ವೃತ್ತಿಜೀವನ, ಅಭಿಮಾನಿಗಳ ಪ್ರೀತಿ, ಸ್ನೇಹಿತರ ಕಾಳಜಿ ಇದ್ದರೂ ನಂದಿನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಮನಸ್ಸು ದುರ್ಬಕಗೊಂಡಿರುವುದಕ್ಕೆ ಸಾಕ್ಷಿ. ಮನಸ್ಸು ದುರ್ಬಲಗೊಳ್ಳುವುದು ಅರಿವಾಗುತ್ತಿದ್ದಂತೆ ಆಕೆ ಕೌನ್ಸಿಲಿಂಗ್‌ಗೆ ಒಳಗಾಗಿ ಖಿನ್ನತೆಗೆ ಚಿಕಿತ್ಸೆ ಪಡೆದಿದ್ದರೆ ನಂದಿನಿ ಬದುಕಿರುತ್ತಿದ್ದಳು.