ಮಂಗಳೂರು: ಗಂಜಿಮಠ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ನಿಟ್ಟೆ ಹಾಗೂ ರಾಜ್ ಅಕಾಡೆಮಿ, ಗಂಜಿಮಠ ಇವರ ಜಂಟಿ ಆಶ್ರಯದಲ್ಲಿ, ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ–ಮಂಗಳೂರು ಮತ್ತು ಎ.ಬಿ. ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್, ದೇರಳಕಟ್ಟೆ ಇವರ ಸಹಯೋಗದೊಂದಿಗೆ ರಾಜ್ ಅಕಾಡೆಮಿ, ಗಂಜಿಮಠದಲ್ಲಿ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವು ಭಾನುವಾರ ಯಶಸ್ವಿಯಾಗಿ ನಡೆಯಿತು.

ಶಿಬಿರವನ್ನು ಅಶ್ವಿನಿ ಕ್ಲಿನಿಕ್‌ನ ವೈದ್ಯರಾದ ಡಾ. ಶ್ರೀದೇವಿ ಆರ್. ಭಟ್ ಹಾಗೂ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಗೋಪಾಲಕೃಷ್ಣ ಭಟ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಶಿಬಿರದಲ್ಲಿ ವಿವಿಧ ಕ್ಷೇತ್ರಗಳ ತಜ್ಞ ವೈದ್ಯರು ಆರೋಗ್ಯ ತಪಾಸಣೆ ನಡೆಸಿ ಸಲಹೆ ನೀಡಿದರು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಂಡರು. ಈ ಶಿಬಿರವು ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಅರಿವು ಹಾಗೂ ಸಮಯೋಚಿತ ತಪಾಸಣೆಯ ಮಹತ್ವವನ್ನು ತಿಳಿಸುವಲ್ಲಿ ಸಹಕಾರಿಯಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದ ಎಲ್ಲಾ ವೈದ್ಯರು, ಸಂಘಟಕರು ಹಾಗೂ ಸಿಬ್ಬಂದಿ ವರ್ಗಕ್ಕೆ ಆಯೋಜಕರಿಂದ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಗಂಜಿಮಠ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶೋಹನ್ ಅತಿಕಾರಿ, ಉಪಾಧ್ಯಕ್ಷರಾದ ತಮ್ಮಯ್ಯ ಎಸ್. ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ನಮಿತ, ನಿರ್ದೇಶಕರಾದ ಜಾನಪ್ಪ ಗೌಡ, ಜಯಾನಂದ ನಾಯ್ಕ, ಭೋಜರಾಜ್ ಶೆಟ್ಟಿ, ಗಂಗಾಧರ ಕುಲಾಲ್, ರವಿ, ಕುಮಾರ ಚಂದ್ರ, ಜಯರಾಮ್ ಶೆಟ್ಟಿ, ಮಾಧವ, ಹರಿಣಾಕ್ಷಿ ಹಾಗೂ ರೇಖಾ ಉಪಸ್ಥಿತರಿದ್ದರು.

ಇದಲ್ಲದೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ವಲಯ ಮೇಲ್ವಿಚಾರಕರಾದ ಕಿರಣ್ ಕುಮಾರ್ ಹಾಗೂ ಸಂಘದ ಸಿಬ್ಬಂದಿ ವರ್ಗದವರು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.