ಭಾರತದಲ್ಲಿ 1 ಲಕ್ಷದ ಮೈಲಿಗಲ್ಲನ್ನು ದಾಟಿದ ಪೆಟ್ರೋಲ್‌ ಬಂಕ್‌

ನವದೆಹಲಿ: ಭಾರತದಲ್ಲಿರುವ ಒಟ್ಟಾರೆ ಪೆಟ್ರೋಲ್‌ ಬಂಕ್‌ಗಳ ಸಂಖ್ಯೆ 1 ಲಕ್ಷದ ಮೈಲಿಗಲ್ಲನ್ನು ದಾಟಿವೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಅಂಕಿ-ಅಂಶಗಳು ತಿಳಿಸಿವೆ.

2025ರ ನವೆಂಬರ್‌ ಅಂತ್ಯಕ್ಕೆ ದೇಶದಲ್ಲಿ ಒಟ್ಟಾರೆ 1,00,266 ಬಂಕ್‌ಗಳಿದ್ದು, ಅಮೆರಿಕ, ಚೀನಾ ಬಳಿಕ ಅತಿಹೆಚ್ಚು ಬಂಕ್‌ಗಳಿರುವ ದೇಶವಾಗಿ ಹೊರಹೊಮ್ಮಿದೆ. ದೇಶದ ಶೇ.90ಕ್ಕಿಂ­ತಲೂ ಹೆಚ್ಚು ಪಂಪ್‌ಗ್ಳು ಸರ್ಕಾರಿ ಸ್ವಾಮ್ಯದ ಕಂಪನಿಗಳ ಒಡೆತನದಲ್ಲಿವೆ ಎಂಬುದು ಗಮನಾರ್ಹ. ವಾಹನಗಳ ಹೆಚ್ಚಳ, ಗ್ರಾಮೀಣ ಪ್ರದೇಶ, ಹೆದ್ದಾರಿಗಳಲ್ಲಿ ಇಂಧನ ಲಭ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಪ್ರಯತ್ನದಿಂದಾಗಿ 2015ಕ್ಕೆ ಹೋಲಿಸಿದಲ್ಲಿ ಬಂಕ್‌ಗಳ ಸಂಖ್ಯೆ ದ್ವಿಗುಣವಾಗಿದೆ.

error: Content is protected !!