ನೇಪಲ್ಸ್, ಇಟಲಿ: ಪೊಂಪೈಯಿಂದ ಮೂರು ಮೈಲಿ ಪಶ್ಚಿಮಕ್ಕೆ ಇರುವ ಪ್ರಾಚೀನ ರೋಮನ್ ಪಟ್ಟಣ ಓಪ್ಲೋಂಟಿಸ್‌ನಲ್ಲಿ ವಿಲ್ಲಾ ಪೊಪ್ಪೆಯಾದಲ್ಲಿ ಕೆಲಸ ಮಾಡುತ್ತಿರುವ ಪುರಾತತ್ತ್ವ ಶಾಸ್ತ್ರಜ್ಞರು ಹಲವಾರು ಹಸಿಚಿತ್ರಗಳನ್ನು ಪತ್ತೆಹಚ್ಚಿದ್ದಾರೆ.

ಕ್ರಿ.ಪೂ. ಮೊದಲ ಶತಮಾನದ ಮಧ್ಯಭಾಗದಲ್ಲಿ ಸಮುದ್ರದ ಮೇಲಿರುವ ಈ ಐಷಾರಾಮಿ ವಿಲ್ಲಾ(ಅರಮನೆ) ಕ್ರಿ.ಶ. 79 ರಲ್ಲಿ ವೆಸುವಿಯಸ್ ಪರ್ವತ ಸ್ಫೋಟದಲ್ಲಿ ಬೂದಿಯಲ್ಲಿ ಹೂತುಹೋಗಿತ್ತು. ಸ್ಥಳದಲ್ಲಿ ಪತ್ತೆಯಾಗಿರುವ ಆಂಫೋರಾಗಳ ಶಾಸನಗಳು, ಈ ವಿಲ್ಲಾ ನೀರೋನನ ಎರಡನೇ ಪತ್ನಿ ಪೊಪ್ಪೆಯಾ ಸಬೀನಾಗೆ ಸಂಬಂಧವಿರಬಹುದು ಎಂದು ಸೂಚಿಸುತ್ತವೆ.
ಹಸಿಚಿತ್ರಗಳು ಹಾಲ್ಅಫ್ ದಿ ಪೀಕಾಕ್ ಎಂದು ಕರೆಯಲ್ಪಡುವ ಕೋಣೆಯಲ್ಲಿ ಪತ್ತೆಯಾಗಿವೆ, ಇಲ್ಲಿ ನವಿಲುಗಳ ಚಿತ್ರಗಳು ಚಿತ್ರಿತವಾಗಿವೆ. ಜೊತೆಗೆ, ಅಟೆಲ್ಲನ್ ಫಾರ್ಸ್ ನಾಟಕದ ಪಪ್ಪಸ್ ಪಾತ್ರದ ಹಾಸ್ಯ ಮುಖವಾಡದ ತುಣುಕುಗಳೂ ಕಾಣಿಸಿಕೊಂಡಿವೆ. ಪಪ್ಪಸ್ ವಯಸ್ಸಾದ ವ್ಯಕ್ತಿಯಾಗಿದ್ದರೂ ಯುವಕನಂತೆ ತೋರಲು ಪ್ರಯತ್ನಿಸುವ ಹಾಸ್ಯದ ಸಂಕೇತವಾಗಿದೆ.
ಪತ್ತೆಗಳು ಓಪ್ಲೋಂಟಿಸ್‌ನ ಐತಿಹಾಸಿಕ ಸಾಂಸ್ಕೃತಿಕ ವೈಭವವನ್ನು ಮತ್ತಷ್ಟು ಬೆಳಗಿಸುತ್ತವೆ. ಹೆಚ್ಚಿನ ವಿವರಗಳಿಗೆ ʻಆಫ್ ದಿ ಗ್ರಿಡ್: ಓಪ್ಲೋಂಟಿಸ್, ಇಟಲಿʼ ಸಂಪನ್ಮೂಲವನ್ನು ಉಲ್ಲೇಖಿಸಲಾಗಿದೆ.