ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದ ಆರೋಪಿ ಚಿನ್ನಯ್ಯ ತಿಮರೋಡಿ ಬಳಗದಿಂದ ಜೀವ ಬೆದರಿಕೆಯಿದೆ ಎಂದು ದೂರು ನೀಡಿದ್ದಾರೆ.

ಧರ್ಮಸ್ಥಳ ಪ್ರಕರಣದ ಆರೋಪಿ ಚಿನ್ನಯ್ಯ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ತನಗೆ ಮತ್ತು ಪತ್ನಿಗೆ ಜೀವ ಬೆದರಿಕೆಯಿದೆ ಎಂದು ಡಿ.18ರಂದು ದೂರು ನೀಡಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ ಗೌಡ, ಜಯಂತ್ ಮತ್ತು ಸಮೀರ್ ಎಂ.ಡಿ ವಿರುದ್ಧ ಚಿನ್ನಯ್ಯ ದೂರು ನೀಡಿದ್ದಾರೆ.