ಮಾರ್ಗಸೂಚಿ ಪಾಲಿಸಿದರಷ್ಟೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಾಟಕ್ಕೆ ಅನುಮತಿ

ಬೆಂಗಳೂರು: ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಗಳು ನಡೆಸಲು ಹಲವು ಷರತ್ತುಗಳನ್ನು ವಹಿಸಲಾಗಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ಬೆಂಗಳೂರು ಪೊಲೀಸರು 17 ಅಂಶಗಳ ಮಾರ್ಗಸೂಚಿಗಳನ್ನು ನೀಡಿದೆ. ಈ ಮಾರ್ಗಸೂಚಿಗಳನ್ನು ಪಾಲಿಸಿದಲ್ಲಿ ಕ್ರಿಕೆಟ್‌ ಪಂದ್ಯಗಳನ್ನು ಆಯೋಜಿಸಲು ಗ್ರೀನ್‌ ಸಿಗ್ನಲ್‌ ನೀಡಲಾಗುತ್ತದೆ.


ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಸಮಿತಿಯ ಶಿಫಾರಸುಗಳನ್ನು ಆಧರಿಸಿ ಈ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ. ಬೆಂಗಳೂರು ಪೊಲೀಸ್‌ ಕಮಿಷನರ್‌ ಅವರು ಕಾಲ್ತುಳಿತದಂತಹ ಅಹಿತಹರ ಘಟನೆ ಸಂಬಂವಿಸಿದಂತೆ ತಡೆಯಲು ಕಟ್ಟುನಿಟ್ಟಿನ 17 ಮಾರ್ಗಸೂಚಿಗಳನ್ನು ಸಿದ್ಧಪಡಿಸಿದ್ದಾರೆ. ಪೊಲೀಸ್‌ ಇಲಾಖೆ ನೀಡಿದ ಮಾರ್ಗಸೂಚಿಗಳನ್ನು ಅಚ್ಚುಕಟ್ಟಾಗಿ ಕಾರ್ಯರೂಪಕ್ಕೆ ತಂದಲ್ಲಿ, ಬೆಂಗಳೂರಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಪಂದ್ಯಗಳು ನಡೆಯಲು ಅನುಮತಿ ನೀಡಲಾಗುತ್ತದೆ. ಈ ಮಾರ್ಗಸೂಚಿಗಳ ಬಗ್ಗೆ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ಅವರ ತಂಡ ಗೃಹ ಸಚಿವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ಮಾರ್ಗಸೂಚಿಗಳು:

1. 33 ಸಾವಿರ ಆಸನಗಳನ್ನು ಹೊಂದಿರುವ ಮೈದಾನದಲ್ಲಿ ಕೆಎಸ್‌ಸಿಎ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಅಲ್ಲದೆ ಪಿಕಪ್‌ ಹಾಗೂ ಡ್ರಾಪ್ ವ್ಯವಸ್ಥೆಯನ್ನು ಸಹ ಅಚ್ಚುಕಟ್ಟಾಗಿ ಮಾಡಬೇಕು.

2. ಅಭಿಮಾನಿಗಳಿಗೆ ಕ್ಯೂ ನಿಲ್ಲಲು ಸರಿಯಾದ ವ್ಯವಸ್ಥೆ ಮಾಡಬೇಕು. ಪ್ರವೇಶ ದ್ವಾರಗಳು ಫುಟ್‌ಪಾತ್ ಮೇಲೆ ಇದ್ದಿದ್ದರಿಂದ ಸಮಸ್ಯೆ ಆಗುತ್ತಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.

3. ಕೆಎಸ್‌ಸಿಎ ಮೈದಾನದಲ್ಲಿ ಗೇಟ್‌ಗಳು ಕಿರಿದಾಗಿವೆ. ಈ ಗೇಟ್‌ಗಳನ್ನು ಕನಿಷ್ಠ 6 ಅಡಿ ವಿಸ್ತರಿಸಿದರೆ, ಪಂದ್ಯ ನೋಡಲು ಹೋಗುವ ಹಾಗೂ ಪಂದ್ಯ ನೋಡಿಕೊಂಡು ಹೊರ ಬರುವ ಪ್ರೇಕ್ಷಕರು ಸುಲಭವಾಗುತ್ತದೆ.

4. ಮಕ್ಕಳು ಹಾಗೂ ಮಹಿಳೆಯರಿಗಾಗಿ ವಿಶೇಷ ಪ್ರವೇಶದ ವ್ಯವಸ್ಥೆ ಮಾಡಬೇಕು.

5. ಪಂದ್ಯ ನಡೆಯುವ ವೇಳೆ ಮೈದಾನದಲ್ಲಿ ಮಾರಾಟ ಮಾಡುವ ತಿಂಡಿ ತಿನಿಸುಗಳ ಪರಿಶೀಲನೆಗೆ ನಿರ್ದಿಷ್ಠ ಮಾನದಂಡ ನಿಗದಿಪಡಿಸಬೇಕು.

6. ಮೆಡಿಕಲ್‌ ಎಮರ್ಜೆನ್ಸಿ ತಂಡಗಳನ್ನು ನಿಯೋಜಿಸಿ, ಆಂಬ್ಯುಲೆನ್ಸ್‌ಗೆ ಪ್ರತೇಕ ಮಾರ್ಗ ಮಾಡಬೇಕು.

7. ಅಗ್ನಿಶಾಮಕ ದಳ, ವಿದ್ಯುತ್ ಇಲಾಖೆಯಿಂದ ಆಡಿಟ್ ಮಾಡಿಸಬೇಕು

8. 2025ರ ಐಪಿಎಲ್‌ ಭದ್ರತಾ ವೆಚ್ಚ 2.04 ಕೋಟಿಗಳನ್ನು ತಕ್ಷಣ ಪಾವತಿಸಬೇಕು

9. ಐಡಿ ಚೆಕ್ಕಿಂಗ್‌, ಬಾಂಬ್ ನಿಷ್ಕ್ರೀಯ ದಳ, ಮೆಟಲ್‌ ಡಿಟೆಕ್ಟರ್ ಅಳವಡಿಸಬೇಕು. ಅಲ್ಲದೆ ನುರಿತ ಸಿಬ್ಬಂದಿಯನ್ನು ನೇಮಿಸಬೇಕು.

10. ಆಟಗಾರರಿಗೂ ಪ್ರತೇಕ ಪ್ರವೇಶ ಹಾಗೂ ನಿರ್ಗಮನ ಮಾರ್ಗಗಳನ್ನು ಕಾಯ್ದಿರಿಸಬೇಕು.

ಈ ಮಾರ್ಗಸೂಚಿಗಳು ಸೇರಿದಂತೆ ಇನ್ನು ಹಲವು ಮಾರ್ಗಸೂಚಿಗಳನ್ನು ಪೊಲೀಸ್ ಇಲಾಖೆ ನೀಡಿದೆ.

error: Content is protected !!