ಹುಬ್ಬಳ್ಳಿಯಲ್ಲಿ ಮಿಂಚಿದ “ಶನಿ ಮಹಾತ್ಮೆ”

ಮಂಗಳೂರು: ಕಿಶೋರ್ ಡಿ ಶೆಟ್ಟಿ ನೇತೃತ್ವದ ಶ್ರೀ ಲಲಿತೆ ತಂಡದವರು ಹುಬ್ಬಳ್ಳಿಯ ಸಾವಾಯಿ ಗಂಧರ್ವ ಸಭಾ ಭವನದಲ್ಲಿ ಪ್ರದರ್ಶಿಸಿದ “ಶನಿ ಮಹಾತ್ಮೆ” ಕನ್ನಡ ಪೌರಾಣಿಕ ನಾಟಕವು ಪ್ರೇಕ್ಷಕರನ್ನು ಬೆರಗುಗೊಳಿಸಿತು.

ಹುಬ್ಬಳ್ಳಿಯ ಶನಿ ಪೂಜಾ ಸೇವಾ ಸಮಿತಿಯವರು ಸಾಮೂಹಿಕ ಶನಿ ಪೂಜೆ ನಡೆಸಿ ಶನಿ ದೇವರ ಕಥೆ ಯನ್ನು ನಾಟಕ ದ ಮೂಲಕ ಪ್ರಸ್ತುತಿ ಗೈದರು. ಶನಿ ಜನ್ಮ, ಶನಿ ಪ್ರಭಾವ ವನ್ನು ಬೇರೆ ಬೇರೆ ಯುಗ ಗಳಲ್ಲಿ ತೋರುವ ನವ ರಸ ಭರಿತ ಕಥಾ ವಸ್ತುವನ್ನು ಹೊಂದಿದ ಕದ್ರಿ ನವನೀತ ಶೆಟ್ಟಿ ಅವರು ರಚಿಸಿದ ಈ ನಾಟಕ ದ 48 ನೇ ಪ್ರದರ್ಶನ ಇದಾಗಿದೆ.

ಅದ್ದೂರಿ ಸಂಪ್ರದಾಯಿಕ ರಂಗ ವಿನ್ಯಾಸ, ಆಧುನಿಕ ಬೆಳಕಿನ ವಿನ್ಯಾಸ, ಪೂರ್ವ ಮುದ್ರಿತ ಧ್ವನಿ, ಸೊಗಸಾದ ವೇಷ ಭೂಷಣ, ಹಿತ ಮಿತ ಸಂಗೀತ, ಪ್ರಬುದ್ಧ ಕಲಾವಿದರ ಭಾವ ಪೂರ್ಣ ಅಭಿನಯಗಳೊಂದಿಗೆ ಅಚ್ಚುಕಟ್ಟಾಗಿ ಪ್ರದರ್ಶನಗೊಂಡ ನಾಟಕವನ್ನು ಪ್ರೇಕ್ಷಕರು ಭಕ್ತಿ ಭಾವದಿಂದ ಆಸ್ವಾದಿಸಿದರು. ಇದೇ ಸಂದರ್ಭದಲ್ಲಿ ನಾಟಕ ರಚನೆ ಮಾಡಿದ ಬಹುಮುಖ ಪ್ರತಿಭೆಯ ಕಲಾವಿದ ಕದ್ರಿ ನವನೀತ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಉದ್ಯಮಿಗಳಾದ ರಮೇಶ್ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ, ಅರ್ಚಕ ಅಕ್ಷಯ ಉಡುಪ ಅತಿಥಿಗಳಾಗಿ ಪಾಲ್ಗೊಂಡರು. ಶನಿ ಪೂಜಾ ಸಮಿತಿಯ ಸತೀಶ್ ಡಿ ಶೆಟ್ಟಿ ಅವರು ಅಭಿನಂದಿಸಿದರು. ಸಮಿತಿಯ ಪ್ರಧಾನ ರಾದ ಅನಂತ ಪದ್ಮನಾಭ ಐತಾಳ್, ಕೃಷ್ಣ ಶೆಟ್ಟಿ, ರಮಾನಂದ ಶೆಟ್ಟಿ, ವಿವೇಕ್ ಪೂಜಾರಿ ಉಪಸ್ಥಿತರಿದ್ದರು.

ಶ್ರೀ ಲಲಿತೆ ತಂಡದ ಯಜಮಾನ ಕಿಶೋರ್ ಡಿ ಶೆಟ್ಟಿ, ನಾಟಕ ನಿರ್ದೇಶಕ ಜೀವನ್ ಉಳ್ಳಾಲ್, ಪ್ರಸರಣ ಸಂಯೋಜಕ ಪ್ರದೀಪ್ ಆಳ್ವ ಕದ್ರಿ ಅವರನ್ನು ಗೌರವಿಸಲಾಯಿತು.

error: Content is protected !!