ಅಂದಾಜು 2.58 ಕೋಟಿ ಮೊತ್ತದಲ್ಲಿ ಮಳಲಿ ದೇವರಗುಡ್ಡೆ ದೇವಸ್ಥಾನದ ಪುನರ್ನಿಮಾಣ: ಶೇಖರ್‌ ಜೋಗಿ

ಕೈಕಂಬ: ಮಂಗಳೂರು ತಾಲೂಕಿನ ಗಂಜಿಮಠ ಸಮೀಪದ ಮಳಲಿಯ ಶ್ರೀ ಕ್ಷೇತ್ರ ದೇವರಗುಡ್ಡೆಯ ಪುರಾಣ ಪ್ರಸಿದ್ಧ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಪುನರ್ ನಿರ್ಮಾಣದ ಪ್ರಯುಕ್ತ ಷಡಾಧಾರ ಪ್ರತಿಷ್ಠೆಯು ವೇದಮೂರ್ತಿ ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವಿಧಿ ಗಳೊಂದಿಗೆ ಭಾನುವಾರ ಬೆಳಿಗ್ಗೆ 8-06ರ ಧನುರ್ಲಗ್ನದಲ್ಲಿ ನೆರವೇರಿತು.

ಬೆಳಿಗ್ಗೆ 6.30ಕ್ಕೆ ಪುಣ್ಯಾಹ, 7-30 00 8.30ರ ವರೆಗೆ ಭಜನಾ ಕಾರ್ಯಕ್ರಮದ ಬಳಿಕ ನೂರಾರು ಭಕ್ತರ ಸಮ್ಮುಖದಲ್ಲಿ ಆಧಾರ ಶಿಲಾ ಪ್ರತಿಷ್ಠೆ ನಡೆಯಿತು. ಇದೇ ವೇಳೆ ದೇವಸ್ಥಾನದ ಜೀರ್ಣೋ ದ್ಧಾರ ಸಮಿತಿ ಅಧ್ಯಕ್ಷ ಶೇಖರ್ ಜೋಗಿ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕ್ಷೇತ್ರದ ಜೀರ್ಣೋದ್ದಾರದ ಬಗ್ಗೆ ವಿಜ್ಞಾಪನಾ ಪತ್ರ ಬಿಡುಗಡೆ ಮಾಡಲಾಯಿತು. ಅಂದಾಜು 2.58 ಕೋಟಿ ವೆಚ್ಚದಲ್ಲಿ ದೇವಸ್ಥಾನದ ಪುನರ್ನಿಮಾಣ ಮಾಡಲು ನಿರ್ಧರಿಸಲಾಗಿದ್ದಾಗಿ ಶೇಖರ್‌ ಜೋಗಿ ತಿಳಿಸಿದ್ದಾರೆ.

ಊರು ಸುಭಿಕ್ಷವಾಗಲಿ: ಮಾಧವ ಭಟ್
ಈ ವೇಳೆ ಮಾತನಾಡಿದ ಪೊಳಲಿ ದೇವಸ್ಥಾನದ ಪ್ರಧಾನ ಅರ್ಚಕ, ಪವಿತ್ರಪಾಣಿ ಮಾಧವ ಭಟ್, ಕ್ಷೇತ್ರ ಜೀರ್ಣೋದ್ಧಾರ ಕಾರ್ಯ ಶೀಘ್ರವಾಗಿ, ನಿರಾತಂಕವಾಗಿ ನಡೆದು, ಊರು ಸುಭಿಕ್ಷವಾಗಲಿ ಎಂದರು.

ಮಟ್ಟಿ ದೇವಳ ಆಡಳಿತ ಸಮಿತಿ ಅಧ್ಯಕ್ಷ ಉಮೇಶ್ ನಾಥ್ ಕದ್ರಿ ಜೀರ್ಣೋ ದ್ಧಾರ ಕಾರ್ಯಕ್ಕೆ ಶುಭ ಹಾರೈಸಿದರು. ಉಳಾಯಿಬೆಟ್ಟು ಪೆರ್ಮಂಕಿ ಸದಾಶಿವ ದೇವಸ್ಥಾನದ ಟ್ರಷ್ಟಿ ಕಿರಣ್ ಪಕ್ಕಳ ಪೆರ್ಮಂಕಿಗುತ್ತು, ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್, ಶೇಖರ್ ಜೋಗಿ ಮಾತನಾಡಿದರು.

ಮಳಲಿ ಪುಷ್ಪಾಪುರ ವಿಷ್ಣು ಮೂರ್ತಿ ದೇವಳ ಅರ್ಚಕ ಸತ್ಯನಾರಾಯಣ ಉಪಾಧ್ಯಾಯ, ಮಳಲಿ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ವಾಮನ ನಾಯ್ಕ್‌, ಸೂರ್ಯನಾರಾಯಣ ದೇವಳದ ಟ್ರಸ್ಟ್‌ನ ಗೌರವಾಧ್ಯಕ್ಷ ಉದಯ ಕುಮಾರ್ ಆಳ್ವ ಉಳಿಪಾಡಿಗುತ್ತು, ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಮಟ್ಟಿ ಕ್ಷೇತ್ರದ ಆಡಳಿತ ಮೊತ್ತೇಸರ ಗಂಗಾಧರ್ ಜೋಗಿ, ಧಾರ್ಮಿಕ ಮು ಖಂಡ ಸಂತೋಷ್ ಶೆಟ್ಟಿ, ಹೊಸಲಕ್ಕೆ ಮೋಹನ್ ದಾಸ್ ನಾಯಕ್ ಮೊಗರು, ಅಣ್ಣಯ್ಯ ಎಂ., ರಘುನಾಥ ಸಾಮಾನಿ ಬನತ್ತಡಿ, ಉದ್ಯಮಿ ಭಾಸ್ಕರ್ ಭಟ್, ಸೂರ್ಯನಾರಾಯಣ ದೇವಳ ಟ್ರಷ್ಟಿನ ಅಧ್ಯಕ್ಷ ಭಾಸ್ಕ‌ರ್ ಕುಲಾಲ್ ಮೊಗರು ಮತ್ತಿತರರು ವೇದಿಕೆಯಲ್ಲಿದ್ದರು.

ದೇವಸ್ಥಾನ ಟ್ರಸ್ಟ್‌ನ ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಪದಾಧಿ ಕಾರಿಗಳು, ಸದಸ್ಯರು, ವಿವಿಧ ಧಾರ್ಮಿಕ ಮುಖಂಡರು, ಸಂಘಟನೆ ಗಳ ಪ್ರಮುಖರು, ಭಜನಾ ಮಂಡಳಿ ಸದಸ್ಯರು ಮತ್ತಿತರರಿದ್ದರು.

108 ಸೂರ್ಯ ನಮಸ್ಕಾರ ಸೇವೆ
ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಸದಸ್ಯ ರಿಂದ ಮುಂಜಾನೆ 108 ಸೂರ್ಯ ನಮಸ್ಕಾರ ಸೇವೆ ನಡೆಯಿತು. ಸೂರ್ಯ ನಾರಾಯಣ ಭಜನಾ ಮಂಡಳಿ ಸದಸ್ಯರು ಪ್ರಾರ್ಥನೆ ನಡೆಸಿಕೊಟ್ಟರು. ಪ್ರಾಧ್ಯಾಪಕ ರಮೇಶ್ ಆಚಾರ್ಯ ನಾರಳ ಮತ್ತಿತರರಿದರು. ವಿಕ್ರಂ ಓದ್ದೂರು ನಿರೂಪಿಸಿ, ಶಿವರಾಜ್ ನಾರಾಳ ವಂದಿಸಿದರು. ಮಧ್ಯಾಹ್ನ ಮಹಾಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

error: Content is protected !!