ಬೈಕಂಪಾಡಿ: ಕತ್ತು ಸೀಳಿ ವ್ಯಕ್ತಿಯ ಕೊಲೆ: ಆರೋಪಿ ಪಣಂಬೂರು ಪೊಲೀಸರ ಬಲೆಗೆ

ಪಣಂಬೂರು: ಮದ್ಯ ಕುಡಿಯಲು ಹಣ ಕೊಡಲಿಲ್ಲ ಎಂಬ ವಿಚಾರಕ್ಕೆ ನೆರೆಹೊರೆಯ ವ್ಯಕ್ತಿಗಳ ಮಧ್ಯೆ ಉಂಟಾದ ಜಗಳ ಓರ್ವನ ಕೊಲೆಯೊಂದಿಗೆ ಅಂತ್ಯಗೊಂಡ ಘಟನೆ ಭಾನುವಾರ ತಡರಾತ್ರಿ ಬೈಕಂಪಾಡಿಯಲ್ಲಿ ಸಂಭವಿಸಿದ್ದು, ಇದೀಗ ಬೆಳಕಿಗೆ ಬಂದಿದೆ.

ಕೊಲೆಗೀಡಾದವನನ್ನು ಅಸ್ಸಾಂ ಮೂಲದ ನಿವಾಸಿ ಸಚಿನ್ ಕುಮಾರ್ ಎಂದು ಗುರುತಿಸಲಾಗಿದೆ. ಮೂಲತಃ ಬೆಳಗಾವಿ ಜಿಲ್ಲೆಯಲ್ಲಿದ್ದು, ಪ್ರಸ್ತುತ ಬೈಕಂಪಾಡಿಯ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಪ್ರವೀಣ್ ಶಿವ ಶಂಕರಪ್ಪ ಕೊಲೆ ಆರೋಪಿ ಎಂದು ತಿಳಿದುಬಂದಿದೆ.

ಸಚಿನ್ ಕುಮಾರ್ ಮತ್ತು ಪ್ರವೀಣ್ ಶಿವ ಶಂಕರಪ್ಪ ನೆರೆಹೊರೆಯ ಮನೆಗಳಲ್ಲಿ ವಾಸವಾಗಿದ್ದು ಇಬ್ಬರೂ ಅನೋನ್ಯವಾಗಿದ್ದರು. ಕುಡಿಯಲು ಮದ್ಯ ಖರೀದಿಸಲೆಂದು ಸಚಿನ್ ಕುಮಾರ್ ಶಿವಶಂಕರಪ್ಪನಲ್ಲಿ ಹಣ ಕೇಳಿದ್ದ. ಶಿವಶಂಕರಪ್ಪ ಹಣ ನೀಡದೇ ಸಚಿನ್‌ನನ್ನು ವಾಪಸ್‌ ಕಳುಹಿಸಿದ್ದ ಎನ್ನಲಾಗಿದೆ.

ಆದರೂ ಹಣ ಹೊಂದಿಸಿ ತಡರಾತ್ರಿ ಕಂಠಪೂರ್ತಿ ಕುಡಿದು ಚಿತ್ತಾಗಿ ಬಂದ ಸಚಿನ್ ಕುಮಾರನು ಶಿವ ಶಂಕರಪ್ಪನ‌ ಮನೆ ಬಳಿ ಬಂದು ಆತನ ತಂದೆ-ತಾಯಿಯನ್ನು ನಿಂದಿಸಿದ್ದಾನೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಶಿವಶಂಕರನು ಸಚಿನ್‌ನ ಕುತ್ತಿಗೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.

ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪಣಂಬೂರು ಪೊಲೀಸ್ ನಿರೀಕ್ಷಕ ಸಲೀಂ ಅಬ್ಬಾಸ್ ಅವರ ನೇತೃತ್ವದ ತಂಡ ಆರೋಪಿಗಾಗಿ ಶೋಧ ಆರಂಭಿಸಿದೆ. ಆರೋಪಿ ಪ್ರವೀಣ್ ಶಿವ ಶಂಕರಪ್ಪ ಊರಿನಿಂದ ಪರಾರಿ

ಯಾಗಲು ರೈಲ್ವೆ ನಿಲ್ದಾಣಕ್ಕೆ ಬಂದಿರುವ ಮಾಹಿತಿ ಸಿಗುತ್ತಿದ್ದಂತೆ ತಕ್ಷಣ ಅಲರ್ಟ್‌ ಆಗಿ ಕೃತ್ಯ ನಡೆದ ಕೇವ ಒಂದು ಗಂಟೆಯೊಳಗೆ ಅವನನ್ನು ವಶಕ್ಕೆ ಪಡೆದಿದೆ.

error: Content is protected !!