ನವದೆಹಲಿ: ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಜರ್ ಇತ್ತೀಚೆಗೆ ಮಾಡಿದ ಸಾಮಾಜಿಕ ಮಾಧ್ಯಮ ಪೋಸ್ಟ್ ಭದ್ರತಾ ವಲಯಗಳಲ್ಲಿ ಆತಂಕ ಉಂಟುಮಾಡಿದೆ. ಅಜರ್ ಅವರ ಹೇಳಿಕೆಯ ಪ್ರಕಾರ, ಅಕ್ಟೋಬರ್ 8ರಂದು ಪ್ರಾರಂಭವಾದ ಜೆಇಎಂನ ಮಹಿಳಾ ವಿಭಾಗ ಜಮಾತ್-ಉಲ್-ಮುಮಿನಾತ್ ಈಗಾಗಲೇ 5,000ಕ್ಕೂ ಹೆಚ್ಚು ಮಹಿಳೆಯರನ್ನು ತನ್ನ ಸಂಘಟನೆಯಲ್ಲಿ ಸೇರಿಸಿಕೊಂಡಿದೆ.

ಮಹಿಳಾ ಉಗ್ರರರ ಬ್ರೈನ್‌ವಾಶ್ ಮಾಡಲಾಗಿದ್ದು, ನಮ್ಮ ಹೃದಯ ಬದಲಾಗಿದೆ, ತಾವು ಯಾವಾಗಲೂ ಆತ್ಮಾಹುತಿಗೆ ಸಿದ್ಧ ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ವಿಭಾಗವನ್ನು ಅಜರ್ ಅವರ ಸಹೋದರಿ ಸಾದಿಯಾ ಅಜರ್ ಮುನ್ನಡೆಸುತ್ತಿದ್ದಾಳೆ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಜಿಲ್ಲಾವಾರು ಘಟಕಗಳನ್ನು ರಚಿಸುವ ಮೂಲಕ ಮಹಿಳೆಯರು ಮತ್ತು ಯುವತಿಯರ ನೇಮಕಾತಿ ಹಾಗೂ ಭಯೋತ್ಪಾದಕ ತರಬೇತಿಯನ್ನು ವಿಸ್ತರಿಸುವ ಯೋಜನೆಗಳ ಬಗ್ಗೆ ಅಜರ್ ಪೋಸ್ಟ್‌ನಲ್ಲಿ ಅಜರ್ ವಿವರಿಸಿದ್ದಾಗಿ ರಿಪಬ್ಲಿಕ್ ವರ್ಲ್ಡ್ ವರದಿ ಮಾಡಿದೆ. ಪ್ರತಿ ಜಿಲ್ಲೆಯಲ್ಲಿ ನೇಮಕಾತಿ ಮತ್ತು ಕಾರ್ಯಾಚರಣೆಗೆ ಜವಾಬ್ದಾರವಾಗಿರುವ ವಿಶಿಷ್ಟ ಕಚೇರಿಗಳನ್ನು ಸ್ಥಾಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಅಜರ್ ಉಲ್ಲೇಖಿಸಿರುವಂತೆ, ಸಂಘಟನೆಯಲ್ಲಿ ಸೇರುವ ಮಹಿಳೆಯರಲ್ಲಿ ಹಲವರು ತಮ್ಮ “ಹೃದಯ ಬದಲಾಗಿದೆ” ಮತ್ತು “ಜೀವನದ ನಿಜವಾದ ಉದ್ದೇಶವನ್ನು ಅರ್ಥ ಮಾಡಿಕೊಂಡಿದ್ದಾರೆ” ಎಂಬ ಪತ್ರಗಳನ್ನು ಬರೆದಿದ್ದಾರೆ ಎಂದು ಪೋಸ್ಟ್ ಹೇಳಿದೆ. ಜೆಇಎಂ ಇದರ ಮೂಲಕ ಉಗ್ರ ಧಾರ್ಮಿಕ ಭಾವನೆಗಳನ್ನು ಹೆಚ್ಚಿಸುವ ಪ್ರಯತ್ನ ಮಾಡುತ್ತಿರುವುದು ಸ್ಪಷ್ಟ.
ಪೋಸ್ಟ್‌ನಲ್ಲಿ, ಕ್ಷೇತ್ರವಾರು ಮಹಿಳಾ ಮುಖ್ಯಸ್ಥರ ನೇಮಕಾತಿ, ಕೆಲಸದ ವಿಂಗಡಣೆ ಮತ್ತು ಸಂಘಟಿತ ಚಿಂತನೆಗಳ ಮೂಲಕ “ನಂಬಿಕೆಯ ಕಾರವಾನ್ ಮುಂದುವರಿಯುತ್ತದೆ” ಎಂದು ಹೇಳಲಾಗಿದೆ.
ಅಜರ್ ತನ್ನ ಪೋಸ್ಟ್‌ನಲ್ಲಿ ಯುನೈಟೆಡ್ ಸ್ಟೇಟ್ಸ್‌ನ ನೆಬ್ರಸ್ಕಾ ವಿಶ್ವವಿದ್ಯಾಲಯವನ್ನೂ ಉಲ್ಲೇಖಿಸಿ, “ಅದು ಪಾಕಿಸ್ತಾನದಲ್ಲಿ ಜಿಹಾದಿ ವಾತಾವರಣ ಸೃಷ್ಟಿಸಿತು ಎಂದು ಕೆಲವರು ನಂಬಿದ್ದಾರೆ” ಎಂದು ವ್ಯಂಗ್ಯವಾಗಿ ಹೇಳಿದ್ದಾನೆ. “ಒಂದು ವಿಶ್ವವಿದ್ಯಾಲಯದ ಪಾಠ್ಯಕ್ರಮವೇ ಲಕ್ಷಾಂತರ ಮುಜಾಹಿದ್ದೀನ್‌ರನ್ನು ಸೃಷ್ಟಿಸಿ ಒಂದು ಮಹಾಶಕ್ತಿಯನ್ನು ಸೋಲಿಸಿತು ಎಂದು ಹೇಳುವುದು ಆಶ್ಚರ್ಯಕರ,” ಎಂದು ಪೋಸ್ಟ್ ಹೇಳಿದೆ.
