ಕತ್ತಲ ಕೋಣೆಯ ಸಭೆ:
ಮಾರ್ಚ್ ತಿಂಗಳ ಆ ಶೀತಲ ರಾತ್ರಿ. ಟೆಲ್ ಅವಿವ್‌ನ ಭೂಗತ ಕಮಾಂಡ್ ಸೆಂಟರ್‌ನಲ್ಲಿ ಮೌನ ಮನೆಮಾಡಿತ್ತು. ಎದುರಿಗಿದ್ದ ಬೃಹತ್ ಪರದೆಯ ಮೇಲೆ ಟೆಹ್ರಾನ್‌ನ ʻಬೈತ್ ರಹಬರಿ’ ಕಾಂಪೌಂಡ್‌ನ ಲೈವ್ ಸ್ಯಾಟಲೈಟ್ ದೃಶ್ಯಗಳು ಬಿತ್ತರವಾಗುತ್ತಿದ್ದವು. ಇಸ್ರೇಲ್ ಪ್ರಧಾನಿ ನೆತನ್ಯಾಹು ಮತ್ತು ಮೊಸಾದ್ ಮುಖ್ಯಸ್ಥರು ಅಮೆರಿಕದ ಶ್ವೇತಭವನದ ಜೊತೆ ಸುರಕ್ಷಿತ ಲೈನ್‌ನಲ್ಲಿ ಸಂಪರ್ಕದಲ್ಲಿದ್ದರು. “ಹಸಿರು ನಿಶಾನೆ ಸಿಕ್ಕಿದೆ” ಎಂಬ ಸಂದೇಶ ವಾಷಿಂಗ್ಟನ್‌ನಿಂದ ಬಂದೊಡನೆ, ಜಗತ್ತಿನ ಅತ್ಯಂತ ಅಪಾಯಕಾರಿ ಪತ್ತೆದಾರಿ ಆಟ ಶುರುವಾಯಿತು.

ನಂಬಿಕಸ್ತ ವೈದ್ಯ ಮತ್ತು ʻಹಲ್ಲಿನ’ ರಹಸ್ಯ:
ಈ ಕಾರ್ಯಾಚರಣೆಯ ಅಸಲಿ ಆಟ ಶುರುವಾಗಿದ್ದು ಕೆಲವು ತಿಂಗಳ ಹಿಂದೆಯೇ. ಖಮೇನಿ ಅವರಿಗೆ ಹಲ್ಲಿನ ನೋವು ಕಾಣಿಸಿಕೊಂಡಾಗ, ಅವರ ವೈಯಕ್ತಿಕ ವೈದ್ಯರ ತಂಡದಲ್ಲಿದ್ದ ಒಬ್ಬ ನಂಬಿಕಸ್ತ ವೈದ್ಯನನ್ನು ಮೊಸಾದ್ ಈಗಾಗಲೇ ತನ್ನ ಬಲೆಗೆ ಬೀಳಿಸಿಕೊಂಡಿತ್ತು. ಆ ವೈದ್ಯ ಶಸ್ತ್ರಚಿಕಿತ್ಸೆಯ ನೆಪದಲ್ಲಿ ಖಮೇನಿಯ ಹಲ್ಲಿನ ಒಳಗೆ ಅತ್ಯಂತ ಸೂಕ್ಷ್ಮವಾದ ʻನ್ಯಾನೋ ಮೈಕ್ರೋಫೋನ್’ ಮತ್ತು ʻಜಿಪಿಎಸ್ ಟ್ರ್ಯಾಕರ್’ ಅನ್ನು ಅಳವಡಿಸಿದ್ದ. ಇದು ಎಷ್ಟು ಸುಧಾರಿತವಾಗಿತ್ತೆಂದರೆ, ಖಮೇನಿ ಅವರು ರಹಸ್ಯ ಬಂಕರ್‌ನೊಳಗೆ ಪಿಸುಮಾತಿನಲ್ಲಿ ಆಡುವ ಮಾತುಗಳೂ ಇಸ್ರೇಲ್‌ನ ಕಮಾಂಡ್ ಸೆಂಟರ್‌ನಲ್ಲಿ ಸ್ಪಷ್ಟವಾಗಿ ಕೇಳಿಸುತ್ತಿದ್ದವು!
ಪೇಜರ್ ಸಂಕೇತ ಮತ್ತು ಸೈಬರ್ ಬಲೆ:
ದಾಳಿಗೂ ಮುನ್ನ ಇಸ್ರೇಲ್ ಮೊದಲು ಪ್ರಯೋಗಿಸಿದ್ದು ಸೈಬರ್ ಅಸ್ತ್ರವನ್ನು. ಇರಾನ್‌ನ ಇಡೀ ಸಂವಹನ ವ್ಯವಸ್ಥೆಯನ್ನು ಮೊಸಾದ್ ಹ್ಯಾಕ್ ಮಾಡಿತ್ತು. ಖಮೇನಿ ಅವರ ಭದ್ರತಾ ಪಡೆಯ ಅಧಿಕಾರಿಗಳ ಪೇಜರ್ ಮತ್ತು ವಯರ್‌ಲೆಸ್ ಸಾಧನಗಳಿಗೆ ತಪ್ಪಾದ ಸಂದೇಶಗಳು ರವಾನೆಯಾದವು. “ತುರ್ತು ಪರಿಸ್ಥಿತಿ, ಕೂಡಲೇ ಎಲ್ಲರನ್ನೂ ಲೀಡರ್‌ರನ್ನು ಬಂಕರ್‌ಗೆ ಕಳಿಸಿ ಎಲ್ಲರೂ ಅಲ್ಲೇ ಬನ್ನಿ ತುರ್ತು ಮೀಟಿಂಗ್ ಇದೆ” ಎಂದು ಸುಪ್ರೀಂ ಲೀಡರ್‌ನ ಹೆಸರಲ್ಲಿ ಮೊಸಾದ್ ಕಳುಹಿಸಿದ ಸುಳ್ಳು ಸಂದೇಶವನ್ನು ಅಸಲಿ ಎಂದು ನಂಬಿದ ಅಧಿಕಾರಿಗಳು, ಸ್ವತಃ ತಾವೇ ಖಮೇನಿ ಅವರನ್ನು ಸುರಕ್ಷಿತ ಎನ್ನಲಾದ ಆ ‘ಡೆತ್ ಟ್ರ್ಯಾಪ್’ (ಸಾವಿನ ಬಲೆ) ನೊಳಗೆ ಕರೆದೊಯ್ದರು! (ಈ ಹಿಂದೆ ಇಸ್ರೇಲ್ ಪೇಜರ್ ಅನ್ನು ಸಹ ಬ್ಲಾಸ್ಟ್ ಮಾಡಿದ್ದರಿಂದ ನೇರ ಸಂವಾದಗಳು ನಡೆಯುತ್ತಿತ್ತು ಎನ್ನುವ ವರ್ತಮಾನ ಇದೆ)
ನಗರದೊಳಗಿನ ʻಅದೃಶ್ಯ’ ಬೇಟೆಗಾರರು:
ಟೆಹ್ರಾನ್‌ನ ಬೀದಿಗಳಲ್ಲಿ ಹರಿದ ಹಳೆಯ ಟ್ಯಾಕ್ಸಿಯೊಂದರಲ್ಲಿ ಇಬ್ಬರು ಮೊಸಾದ್ ಏಜೆಂಟರು ಕುಳಿತಿದ್ದರು. ಅವರ ಕೈಯಲ್ಲಿದ್ದ ಟ್ಯಾಬ್ಲೆಟ್‌ಗೆ ಖಮೇನಿಯ ಹಲ್ಲಿನಿಂದ ನೇರ ಸಿಗ್ನಲ್ ತಲುಪುತ್ತಿತ್ತು. ಆಕಾಶದಲ್ಲಿ ಅಮೆರಿಕದ ʻರಿಪರ್ ಡ್ರೋನ್‌ಗಳು’ ಶಬ್ದವಿಲ್ಲದೆ ಸುಳಿದಾಡುತ್ತಿದ್ದವು. ಮಧ್ಯಾಹ್ನ 2:30ಕ್ಕೆ, ಖಮೇನಿ ಅವರು 80 ಅಡಿ ಆಳದ ಕಾಂಕ್ರೀಟ್ ಬಂಕರ್‌ನೊಳಗೆ ಕುಳಿತಿದ್ದ ನಿಖರ ಮಾಹಿತಿ ಲಭ್ಯವಾಯಿತು. ಬಂಕರ್‌ನೊಳಗೆ ಇರಾನ್‌ನ ರೇಡಾರ್‌ಗಳು ಕೆಲಸ ಮಾಡುತ್ತಿರಲಿಲ್ಲ, ಆದರೆ ಖಮೇನಿ ಹಲ್ಲಿನಲ್ಲಿದ್ದ ಆ ʻಮೋಸದ ಚಿಪ್’ ಮೃತ್ಯುವಿನ ಸಂಕೇತವಾಗಿ ಕೆಲಸ ಮಾಡುತ್ತಿತ್ತು!

ಆ ಡೆಡ್ಲಿ ಕ್ಷಣ :
“ಗುರಿ ಈಗ ನಿಖರವಾಗಿದೆ,” ಎಂದು ಟೆಹ್ರಾನ್‌ನಲ್ಲಿದ್ದ ಆ ಮೊಸಾದ್ ಏಜೆಂಟ್ ಲೇಸರ್ ಪಾಯಿಂಟರ್ ಒತ್ತಿದ ತಕ್ಷಣ, ಆಕಾಶದಿಂದ ʻಬಂಕರ್ ಬಸ್ಟರ್’ ಕ್ಷಿಪಣಿಗಳು ಬೆಂಕಿಯ ಉಂಡೆಗಳಂತೆ ನುಗ್ಗಿ ಬಂದವು. ಲೇಸರ್ ಮಾರ್ಗದರ್ಶಿತ ಆ ಕ್ಷಿಪಣಿಗಳು ಬಂಕರ್‌ನ ಕಾಂಕ್ರೀಟ್ ಗೋಡೆಗಳನ್ನು ಬೆಣ್ಣೆಯಂತೆ ಸೀಳಿಕೊಂಡು ಹೋಗಿ, ಖಮೇನಿ ಇದ್ದ ನಿಖರವಾದ ಪಾಯಿಂಟ್‌ಗೆ ಅಪ್ಪಳಿಸಿದವು. ಭೀಕರ ಸ್ಫೋಟದೊಂದಿಗೆ ಟೆಹ್ರಾನ್‌ನ ಆಕಾಶದಲ್ಲಿ ಧೂಳಿನ ಮೋಡ ಏಳುತ್ತಿದ್ದಂತೆ, ಟೆಲ್ ಅವಿವ್‌ನಲ್ಲಿ ನೆತನ್ಯಾಹು ಮೆಲ್ಲಗೆ ಹೇಳಿದರು— “ಚೆಕ್ ಮೇಟ್.”

ಮಾವುತ ಮಾಯ:
ಸ್ಫೋಟದ ಸದ್ದು ಇಡೀ ನಗರವನ್ನು ನಡುಗಿಸುತ್ತಿದ್ದಂತೆ, ಟೆಹ್ರಾನ್ ಬೀದಿಯಲ್ಲಿದ್ದ ಮೊಸಾದ್ ಏಜೆಂಟರು ಮತ್ತು ಆ ‘ಏಜೆಂಟ್ ಡಾಕ್ಟರ್’ ತಮ್ಮ ಸಂವಹನ ಸಾಧನಗಳನ್ನು ಸುಟ್ಟು ಹಾಕಿ ನಿಗೂಢವಾಗಿ ಮಾಯವಾಗಿದ್ದರು. ತನ್ನನ್ನು ರಕ್ಷಿಸಬೇಕಿದ್ದ ವೈದ್ಯನೇ ತನ್ನ ಸಾವಿನ ದಾರಿಯನ್ನು ಅಗೆದಿದ್ದ ಎಂಬುದು ಖಮೇನಿ ಅವರಿಗೆ ತಿಳಿಯಲೇ ಇಲ್ಲ. ಇದು ಮೊಸಾದ್ ಇತಿಹಾಸದ ಅತ್ಯಂತ ‘ಪರ್ಫೆಕ್ಟ್ ಟ್ರ್ಯಾಪ್’ ಎಂದು ದಾಖಲಾಯಿತು. ಖಮೇನಿ ಮಾತ್ರವಲ್ಲ ಇವರ ನಂತರ ಇರಾನ್ ಚುಕ್ಕಾಣಿ ಹಿಡಿಯಬೇಕಿದ್ದ ಭವಿಷ್ಯದ ಸುಪ್ರೀಂ ಲೀಡರ್‌ಗಳೂ ಸಹ ಬೂದಿಯಾಗಿದ್ದರು.
(ಗಮನಿಸಿ: ಈ ಮಾಹಿತಿಯು ಸದ್ಯ ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವಿವಿಧ ಮೂಲಗಳನ್ನು ಆಧರಿಸಿದ್ದು, ಇರಾನ್‌ನ ಸುಪ್ರೀಂ ಲೀಡರ್ ಸಾವಿನ ಕುರಿತಾಗಲಿ ಅಥವಾ ಈ ಪತ್ತೆದಾರಿ ಮಾದರಿಯ ಕಾರ್ಯಾಚರಣೆಯ ಬಗ್ಗೆಯಾಗಲಿ ಯಾವುದೇ ಅಧಿಕೃತ ಅಂತರಾಷ್ಟ್ರೀಯ ದೃಢೀಕರಣ ಲಭ್ಯವಿಲ್ಲ.)