ಕಾರ್ಕಳ: ಚೀನಾದ ಶಾಂಗ್ಲೋ ನಗರದಲ್ಲಿ ನಡೆಯಲಿರುವ ವಿಶ್ವ ಶಾಲಾ ಮಕ್ಕಳ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ 15 ವರ್ಷ ಒಳಗಿನ ಬಾಲಕಿಯರ ರಾಷ್ಟ್ರೀಯ ತಂಡವನ್ನು ಕಾರ್ಕಳದ ಪ್ರತಿಭಾವಂತ ಆಟಗಾರ್ತಿ ಶಗುನ್ ಎಸ್. ವರ್ಮ ಹೆಗ್ಡೆ ನಾಯಕಿಯಾಗಿ ಮುನ್ನಡೆಸಲಿದ್ದಾರೆ.

ಶಾಂಗ್ಲೋ ನಗರದಲ್ಲಿ ಡಿಸೆಂಬರ್ 3 ರಿಂದ 13ರವರೆಗೆ ವಿಶ್ವ ಮಟ್ಟದ ಈ ಕ್ರೀಡಾಕೂಟ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ವಿಶ್ವದ ಅನೇಕ ರಾಷ್ಟ್ರಗಳ ಶಾಲಾ ತಂಡಗಳು ಭಾಗವಹಿಸಲಿದೆ. ಭಾರತದಿಂದ ಆಯ್ಕೆಯಾದ ತಂಡಕ್ಕೆ ಕಾರ್ಕಳದ ಶಗುನ್ ನಾಯಕತ್ವ ವಹಿಸಿರುವುದು ತಾಲೂಕಿನಲ್ಲಿ ಹೆಮ್ಮೆಯ ವಾತಾವರಣ ಮೂಡಿಸಿದೆ.
ಶಗುನ್ ವರ್ಮ ಹೆಗ್ಡೆ ದೇಶೀಯ ಮಟ್ಟದಲ್ಲಿ ನಿರಂತರವಾಗಿ ಮೆಚ್ಚುಗೆಗೆ ಪಾತ್ರವಾದ ಪ್ರದರ್ಶನ ನೀಡಿ, ನಾಯಕತ್ವ ಗುಣಗಳಿಂದಲೇ ರಾಷ್ಟ್ರೀಯ ಆಯ್ಕೆದಾರರ ಗಮನ ಸೆಳೆದಿದ್ದರು. ಜಾಗತಿಕ ವೇದಿಕೆಯಲ್ಲಿ ಭಾರತೀಯ ತಂಡವನ್ನು ಮುನ್ನಡೆಸುತ್ತಿರುವುದು ಆಕೆಯ ವೃತ್ತಿಜೀವನದ ಮಹತ್ತರ ಕ್ಷಣವಾಗಿದೆ.
ತಾಲೂಕು ಕ್ರೀಡಾಭಿಮಾನಿಗಳು, ಶಾಲಾ ಗುರುಗಳು ಮತ್ತು ಕ್ರೀಡಾ ಸಂಘಟನೆಗಳು ಶಗುನ್‌ಗೆ ಶುಭ ಹಾರೈಸಿದ್ದು, ಭಾರತದ ತಂಡ ಉತ್ತಮ ಸಾಧನೆ ಮಾಡಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ಕಾರ್ಕಳದ ಶಗುನ್ ಚೀನಾದಲ್ಲಿ ನಡೆಯಲಿರುವ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆ
