ಶಾಸಕ ಡಾ. ಭರತ್ ಶೆಟ್ಟಿಯವರಿಂದ ಶ್ರೀ ಧರ್ಮಶಾಸ್ತ ಅಯ್ಯಪ್ಪ ಭಕ್ತವೃಂದ ಕಲಾ ಮಂಟಪ ಲೋಪಾರ್ಪಣೆ

ಮಂಗಳೂರು: ನಗರ ಉತ್ತರ ಕ್ಷೇತ್ರದ ಶಾಸಕರು ಡಾ. ವೈ ಭರತ್ ಶೆಟ್ಟಿಯವರ ವಿಶೇಷ ಅನುದಾನಲ್ಲಿ ಆಶ್ರಯಕಾಲನಿಯಲ್ಲಿ ನಿರ್ಮಾಣಗೊಂಡ ಶ್ರೀ ಧರ್ಮಶಾಸ್ತ ಅಯ್ಯಪ್ಪ ಭಕ್ತವೃಂದ ಕಲಾ ಮಂಟಪವನ್ನು ಮಾನ್ಯ ಶಾಸಕರು ಡಾ. ವೈ ಭರತ್ ಶೆಟ್ಟಿಯವರು ಲೋಕಾರ್ಪಣೆಗೊಳಿಸಿದರು. ನಂತರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ಲೋಕಾರ್ಪಣೆಗೊಂಡ ಕಲಾ ಮಂಟಪದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿ ಎಂದರು.

ಸಭೆಯಲ್ಲಿ ಶ್ರೀ ಧರ್ಮ ಶಾಸ್ತ ಅಯ್ಯಪ್ಪ ಭಕ್ತವೃಂದ ಗುರುಸ್ವಾಮಿ ಬಾಬು ಪೂಜಾರಿ, ನಿಕಟ ಪೂರ್ವ ಮನಪಾ ಸದಸ್ಯರು ಶ್ರೀಮತಿ ಸರಿತಾ ಶಶಿಧರ್, ಸುರತ್ಕಲ್ ವ್ಯವಸಾಯ ಸೇವಾ ಸಹಕಾರ ಸಂಘ ಅಧ್ಯಕ್ಷರು ಅಶೋಕ್ ಶೆಟ್ಟಿ, ಮಾಜಿ ಮನಪಾ ಸದಸ್ಯರು ಗುಣಶೇಖರ್ ಶೆಟ್ಟಿ, ಶ್ರೀ ನಾಗಬ್ರಹ್ಮ ರಕ್ತೇಶ್ವರಿ ದೇವಸ್ಥಾನ ಅಧ್ಯಕ್ಷರು ಶ್ರೀ ರವಿ ಶೆಟ್ಟಿ, ಬಿಜೆಪಿ ದ. ಕ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಭರತ್ ರಾಜ್ ಕೃಷ್ಣಾಪುರ, ಬಿಜೆಪಿ ಮಹಾ ಶಕ್ತಿಕೇಂದ್ರ ಅಧ್ಯಕ್ಷರು ದಿನಕರ್ ಇಡ್ಯಾ, ಶ್ರೀ ನಾಗಬ್ರಹ್ಮ ರಕ್ತೇಶ್ವರಿ ದೇವಸ್ಥಾನ ಗೌರವಾಧ್ಯಕ್ಷರು ಕೃಷ್ಣ ಕುಕ್ಯಾನ್, ಬಿಜೆಪಿ ವೃತ್ತಿಪರ ಪ್ರಕೋಷ್ಠ ಸಹ ಸಂಚಾಲಕರು ಬಾಬುಚಂದ್ರ, ಕಾಲೇಜು ಶಿಕ್ಷಣ ಇಲಾಖೆ ಪ್ರೊಫೆಸರ್, ಸ್ಪೆಷಲ್ ಆಫೀಸರ್ ದೇವಿ ಪ್ರಸಾದ್ ಬಿಜೆಪಿ ಇಡ್ಯಾ ಪೂರ್ವ 6ನೇ ವಾರ್ಡ್ ಅಧ್ಯಕ್ಷರು ಶಶಿಧರ್ ಕಟ್ಲ, ಶ್ರೀ ನಾಗಬ್ರಹ್ಮ ರಕ್ತೇಶ್ವರಿ ದೇವಸ್ಥಾನ ಗೌರವಧ್ಯಕ್ಷರು ವಿಕಾಸ್ ಸುವರ್ಣ, ಹಿಂದೂ ಧಾರ್ಮಿಕ ಸೇವಾ ಸಮಿತಿ NFC ಪ್ರಮುಖರು ಉದಯ ಸಾಲ್ಯಾನ್, ಶ್ರೀ ನಾಗಬ್ರಹ್ಮ ರಕ್ತೇಶ್ವರಿ ದೇವಸ್ಥಾನದ ಪದಾಧಿಕಾರಿಗಳು, ಸದಸ್ಯರು, ಶ್ರೀ ಧರ್ಮಶಾಸ್ತ ಅಯ್ಯಪ್ಪ ಭಕ್ತವೃಂದ ಪ್ರಮುಖರು, ಹಿಂದೂ ಧಾರ್ಮಿಕ ಸೇವಾ ಸಮಿತಿ NFC ಪ್ರಮುಖರು, ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸುಸಜ್ಜಿತ ಕಲಾ ಮಂಟಪ ನಿರ್ಮಿಸಿಕೊಟ್ಟ ಮಾನ್ಯ ಶಾಸಕರು ಡಾ. ವೈ ಭರತ್ ಶೆಟ್ಟಿಯವರನ್ನು, ಮತ್ತು ಇದಕ್ಕೆ ಸಹಕರಿಸಿದ ಶ್ರೀಮತಿ ಸರಿತಾ ಶಶಿಧರ್, ದಿನಕರ್ ಇಡ್ಯಾ, ಗುಣಶೇಖರ್ ಶೆಟ್ಟಿ, ರವಿ ಶೆಟ್ಟಿಯವರನ್ನು, ಗೌರವಿಸಲಾಯಿತು.

ಕಾರ್ಯಕ್ರಮದ ನಿರೂಪಣೆಯನ್ನು ಸುಧಾಮ ಶೆಟ್ಟಿ ಬಾಳ, ಸ್ವಾಗತವನ್ನು ಕು. ರಕ್ಷಾ, ಪ್ರಾಥನೆಯನ್ನು ಗಣೇಶ್ ಆಚಾರ್ಯ ನಡೆಸಿಕೊಟ್ಟರು.

error: Content is protected !!