ದುರಸ್ತಿ ಕಾರ್ಯದ ವೇಳೆ ಕುಸಿದು ಬಿದ್ದ ಸೇತುವೆ : ಓರ್ವ ಸಾವು, ನಾಲ್ವರು ಗಂಭೀರ

ಮಧ್ಯಪ್ರದೇಶ: ಬರೇಲಿ-ಪಿಪರಿಯಾ ರಾಜ್ಯ ಹೆದ್ದಾರಿಯ ನಯಾಗಾಂವ್ ಸೇತುವೆಯಲ್ಲಿ ನಡೆಯುತ್ತಿದ್ದ ನಿರ್ವಹಣಾ ಕಾರ್ಯದ ವೇಳೆ ಸೇತುವೆಯ ಸ್ಪ್ಯಾನ್ ಅಕಸ್ಮಾತ್ ಕುಸಿದು ಬಿದ್ದು, ಎರಡು ಬೈಕ್‌ಗಳಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಾಜಿ CRPF ಜವಾನ್ ದೇವೇಂದ್ರ ಧಕಾಡ್ ಚಿಕಿತ್ಸೆ ವೇಳೆ ಮೃತಪಟ್ಟಿದ್ದು, ಗಾಯಾಳುಗಳನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಧಾವಿಸಿ ಶೋಧ ಕಾರ್ಯಗಳನ್ನು ಕೈಗೊಂಡಿದ್ದಾರೆ. ಸೇತುವೆಯ ನಿರ್ವಹಣೆಯಲ್ಲಿ ಭದ್ರತಾ ಕ್ರಮಗಳ ಕುರಿತಂತೆ ಪ್ರಶ್ನೆಗಳು ಎದುರಾಗಿದ್ದು, ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ. ಸಂಬಂಧಿತ ಇಲಾಖೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಸಾರ್ವಜನಿಕರಿಂದ ಆಗ್ರಹ ವ್ಯಕ್ತವಾಗಿದೆ.

error: Content is protected !!