ಗ್ರಾ. ಪಂ. ಕಚೇರಿ ಎದುರು ಮಗಳಿಂದ ತಾಯಿಯ ಮೇಲೆ ಹಲ್ಲೆ: ದೂರು ದಾಖಲಿಸಿದ ಮಹಿಳಾ ರಕ್ಷಣಾ ವೇದಿಕೆ

ಮಂಗಳೂರು: ಗ್ರಾಮ ಪಂಚಾಯತ್ ಕಚೇರಿಯ ಮುಂಭಾಗದಲ್ಲೇ ಮಗಳೇ ತನ್ನ ಹೆತ್ತ ತಾಯಿಯನ್ನು ನೆಲಕ್ಕುರುಳಿಸಿ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮಹಿಳಾ ರಕ್ಷಣಾ ವೇದಿಕೆ ಮಧ್ಯ ಪ್ರವೇಶಿಸಿ ಮಗಳು ನೇತ್ರಾವತಿ ವಿರುದ್ಧ ದೂರು ದಾಖಲಿಸಿದೆ.

ಹಿರಿಯ ನಾಗರಿಕರಾದ ನಿರ್ಮಲಾ ಅವರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಈ ದೂರನ್ನು ದಾಖಲಿಸಲಾಗಿದೆ ಎಂದು ಸಂಘಟನೆ ತಿಳಿಸಿದೆ. ಈ ಸಂದರ್ಭದಲ್ಲಿ ಸಮಾಜ ಸೇವಕಿ ರಮಿತಾ ಸೂರ್ಯವಂಶಿ ಹಾಗೂ ಹಿಂದೂ ಜಾಗರಣ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ದೀಕ್ಷಿತ್ ಉಪಸ್ಥಿತರಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಮೂಡುಶೆಡ್ಡೆ: ಹೆತ್ತ ತಾಯಿಯನ್ನೇ ನೆಲಕ್ಕುರುಳಿಸಿ ಥಳಿಸಿದ ಮಗಳು; ವಿಡಿಯೋ ವೈರಲ್

error: Content is protected !!