“ಯೋಧರ ತ್ಯಾಗದಿಂದಾಗಿ ರಾಷ್ಟ್ರ ಸುರಕ್ಷಿತವಾಗಿದೆ”: ಶಾಸಕ ಕಾಮತ್

ಮಂಗಳೂರು: ಗಡಿ ಹಾಗೂ ದೇಶದೊಳಗೆ ಯೋಧರ ತ್ಯಾಗದಿಂದಾಗಿ ರಾಷ್ಟ್ರ ಸುರಕ್ಷಿತವಾಗಿದ್ದು ನಾಗರಿಕ ಸಮಾಜ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಅಂತಹ ವೀರರ ತ್ಯಾಗವನ್ನು ಎಷ್ಟು ಸ್ಥರಿಸಿದರೂ ಸಾಲದು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.

2008ರ ನ. 26ರಂದು ಮುಂಬಯಿ ಮೇಲೆ ನಡೆದ ಉಗ್ರರ ದಾಳಿಯ ಸಂದರ್ಭದಲ್ಲಿ ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಹೋರಾಡಿದ ಹುತಾತ್ಮ ಸೈನಿಕರನ್ನು ಸ್ಮರಿಸಲು, ಅವರಿಗೆ ನುಡಿ ನಮನ ಸಲ್ಲಿಸಲು ಕದ್ರಿ ಯುದ್ಧ ಸ್ಮಾರಕ ಉದ್ಯಾನವನದಲ್ಲಿ ರಾಷ್ಟ್ರೀಯವಾದಿ ಕೈಸ್ತರ ವೇದಿಕೆಯ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೇದಿಕೆ ಸ್ಥಾಪಕ ಫ್ರಾಂಕ್ಲಿನ್ ಮೊಂತೇರೊ ಮಾತನಾಡಿ, ಸಮಾಜದಲ್ಲಿ ರಾಷ್ಟ್ರಜಾಗೃತಿ ಮೂಡಿಸುವುದಕ್ಕಾಗಿ 16 ವರ್ಷಗಳಿಂತ ಇಂತಹ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ. ರಾಷ್ಟ್ರೀಯ ಏಕತೆ, ಸಮಗ್ರತೆ ಹಾಗೂ ಭದ್ರತೆಯಲ್ಲಿ ರಾಜಿ ಸಂಧಾನದ ಮಾತಿಲ್ಲ ಭಯೋತ್ಪಾದನೆಯ ಬಗ್ಗೆ ನಾವು ಶೂನ್ಯ ಸಹಿಷ್ಣುತೆ ಹೊಂದಿರಬೇಕಾಗಿದೆ. ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯು ಯುವಜನರು ಸೇನಾಪಡೆಗಳಿಗೆ ಸೇರ್ಪಡೆ ಯಾಗಲು ವಿಶೇಷ ಅಭಿಯಾನವನ್ನು ಕೂಡ ನಡೆಸಿಕೊಂಡು ಬರುತ್ತಿದೆ ಎಂದರು.

ಜೋಸೆಫ್ ಸೈಂಟ್ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್‌ವಂ ಮೆಲ್ವಿನ್ ಪಿಂಟೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾವ್ಯದರ್ಶಿ ಝಬುನ್ನೀಸಾ ಸಂವಿಧಾನದ ಪ್ರತಿಜ್ಞಾವಿಧಿ ಬೋಧಿಸಿದರು. ನಿವೃತ್ತ ಶಿಕ್ಷಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ನುಡಿ ನಮನ ಸಲ್ಲಿಸಿದರು.

ಎನ್ ಸಿಸಿ 18ನೇ ಕರ್ನಾಟಕ ಬೆಟಾಲಿಯನ್ ನ ಕಮಾಂಡಿಂಗ್ ಆಫೀಸರ್ ಲೆ। ಕ। ಆರ್.ಪಿ. ರೈ, ಎನ್ ಸಿಸಿ 5ನೇ ಕರ್ನಾಟಕ ನೇವಲ್ ನ ಶಮಂಡಿಂಗ ಅಭಿನರಲಿಬಿನಾ ಎ. ಜಾನ್ಸನ್, ಎನ್‌ಸಿಸಿ 18ನೇ ಕರ್ನಾಟಕ ಬೆಟಾಲಿಯನ್‌ ಅಡ್ಮಿನಿಸ್ಟ್ರೇಟಿವ್ ಆಫೀ ಸರ್ ಲೆ ಕ| ನಿತಿನ್ ನಾರಾಯಣ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಸಿಐ ಎಸ್. ಎ ಅಧಿಕಾರಿ ಕುಲದೀಪ್ ಶರ್ಮ ಮೊದಲಾದವರು ಉಪಸ್ಥಿತರಿದ್ದರು.

ಕದ್ರಿ ಯುದ್ಧ ಸ್ಮಾರಕದಲ್ಲಿ ಹುತಾತ್ಮ ವೀರ ಯೋಧರಿಗೆ ಪುಷ್ಪನಮನ ಸಲ್ಲಿಸಲಾಯಿತು. ಬಳಿಕ ಸ್ಟೇಟಿಂಗ್ ರ್ಯಾಲಿ, ಸಭೆ ನಡೆಯಿತು. ಭರತ ನಾಟ್ಯದಲ್ಲಿ ವಿಶ್ವದಾಖಲೆಗೈದ ಕಲಾವಿದೆ ರೊಮೋನಾ ಇವೆಟ್ ಪಿರೇರಾ ಮತ್ತು ತಂಡದವರಿಂದ ನೃತ್ಯನಮನ ನಡೆಯಿತು. ಲ್ಯಾನಿಪಿಂಟೋವಂದಿಸಿದರು.ಅರುಣ್ ಶೇಟ್ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!