ಮಂಗಳೂರು: ಡಿಸೆಂಬರ್ 8ರಿಂದ 19ರವರೆಗೆ ಬೆಳಗಾವಿಯ ಸ್ವರ್ಣ ಸೌಧದಲ್ಲಿ ಅಧಿವೇಶನ ನಡೆಯಲಿದ್ದು, ಶಾಸಕರಿಗೆ, ಅಧಿಕಾರಿಗಳಿಗೆ, ಅಧಿವೇಶನ ವೀಕ್ಷಕರಿಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿಭಟನೆ ಪ್ರಜಾಪ್ರಭುತ್ವದ ಹಕ್ಕಾಗಿದ್ದು, ಅದಕ್ಕೂ ಸ್ಥಳ ನಿಗದಿ ಮಾಡಲಾಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು.

ಮಂಗಳೂರಿನ ಸರ್ಕ್ಯೂಟ್‌ಹೌಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸ್ವರ್ಣ ಸೌಧದ ಉದ್ಯಾನ ಉದ್ಘಾಟನೆ ನಡೆಯಲಿದ್ದು, ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದ ಕಲ್ಬುರ್ಗಿಯ ವಿನೋದ್ ಕುಮಾರ್ ತಯಾರಿಸಿದ 50×75 ಅಡಿ ಗಾತ್ರದ ಖಾದಿ ಧ್ವಜವನ್ನು ಪ್ರದರ್ಶಿಸಲಾಗುತ್ತದೆ. ಅಧಿವೇಶನದಲ್ಲಿ ಆರಕ್ಕೂ ಅಧಿಕ ಮಸೂದೆಗಳು ಮಂಡನೆಗೆ ಸಿದ್ಧವಾಗಿವೆ. ಕಳೆದ ಅಧಿವೇಶನದಲ್ಲಿ 39ರಲ್ಲಿ 37 ಮಸೂದೆಗಳು ಚರ್ಚೆಯ ಮೂಲಕ ಅಂಗೀಕಾರಗೊಂಡಿವೆ ಎಂದರು.
ಶಾಸಕ ಭರತ್ ಶೆಟ್ಟಿ, ಸಭಾಪತಿ ಬಸವರಾಜ್ ಹೊರಟ್ಟಿ ಅವರ ಆರೋಪಕಕ್ಕೆ ಸಂಬಂಧಿಸಿ ಸತ್ಯ ಯಾವಾಗಲೂ ದಾಖಲೆಯಲ್ಲಿ ಇರುತ್ತದೆ. ಆರೋಪ ಮಾಡಿದವರು ಯಾವುದನ್ನೂ ಲಿಖಿತವಾಗಿ ಸ್ಪೀಕರ್ ಕಚೇರಿಗೆ ನೀಡಿಲ್ಲ. ಹಾಗಾಗಿ ಇದೆಲ್ಲಾ ಚರ್ಚೆಯಾಗುವ ವಿಷಯವೇ ಅಲ್ಲ ಎಂದರು. ಮಸಾಜ್ ಚೇರ್ ಬಗ್ಗೆ ಆರೋಪ ಮಾಡಿದ್ದಾರೆ. ಅಧಿವೇಶನದ ಸಂದರ್ಭ ಶಾಸಕರಿಗೆ ಉಚಿತ ನೆಲೆಯಲ್ಲಿ ಈ ಮಸಾಜ್ ಚೇರ್‌ನಲ್ಲಿ ರಿಲ್ಯಾಕ್ಸ್ ಆಗಲು ಕಂಪೆನಿ ಅವಕಾಶ ನೀಡಿದೆ. ಅದನ್ನು ಖರೀದಿಸುವ ಅವಕಾಶವೂ ಇದೆ. ಸಾಹಿತಿಗಳಿಗೆ 25000 ರೂ. ಶಾಲು ಹಾಕಲಾಗಿದೆ ಎಂದು ದೂರಲಾಗಿದೆ. ಸಾಹಿತಿಗಳಿಗೆ ಗೌರವ ನೀಡುವಾಗ ಅದಕ್ಕೆ ತಕ್ಕ ರೀತಿಯಲ್ಲಿಯೇ ಸನ್ಮಾನಿಸಬೇಕಾಗುತ್ತದೆ. ಅದು ರೇಷ್ಮೆಯ ಶಾಲು. ಅದನ್ನು ಕರ್ನಾಟಕ ರಾಜ್ಯ ಸಿಲ್ಕ್ ಬೋರ್ಡ್‌ನಿಂದಲೇ ಖರೀದಿಸಲಾಗಿದೆ ಎಂದರು.

ಮಂಜನಾಡಿ ದುರಂತದ ಕುರಿತು ಅವರು ಮಾತನಾಡಿ, ಮೃತರಾದ ಮೂವರ ಕುಟುಂಬಗಳಿಗೆ 15 ಲಕ್ಷ ಮತ್ತು ದೇರ್ಲಕಟ್ಟೆಯಲ್ಲಿ ಮೃತಪಟ್ಟ ಮಗುವಿನ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು. ಘಟನೆ ನಂತರ 24 ಗಂಟೆಯೊಳಗೆ ಉಸ್ತುವಾರಿಗಳು ಭೇಟಿ ನೀಡಿದ್ದರು ಎಂದರು. ಕಾಲು ಕಳೆದುಕೊಂಡ ತಾಯಿಗೆ ಪರಿಹಾರ ಸಿಗಲಿಲ್ಲ ಎಂಬ ವಿಷಯ ಸರ್ಕಾರದ ಗಮನಕ್ಕೆ ಬಂದಿಲ್ಲವೆಂದೂ, ಮನೆ ಹಾನಿಗೆ ಸಂಬಂಧಿಸಿದ ಪರಿಹಾರ ಯಾರೂ ತಮ್ಮ ಗಮನಕ್ಕೆ ತಂದಿಲ್ಲವೆಂದೂ ಹೇಳಿದರು. ವಿಷಯ ತಿಳಿಸಿದರೆ ಕಾನೂನು ಪ್ರಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಳೆಹಾನಿ ಪರಿಹಾರವನ್ನು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಬೆಂಗಳೂರಿನಲ್ಲಿ ಬೀದಿನಾಯಿಗಳಿಗೆ ಶೆಲ್ಟರ್ ಮಾದರಿ ಜಿಲ್ಲೆಯಲ್ಲಿಯೂ ಬೀದಿ ನಾಯಿಗಳಿಗೆ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಮನೆಯವರು ತಮ್ಮ ಮನೆಯ ಬಗ್ಗೆ ಪಂಚಾಯತ್‌ಗೆ ಮಾಹಿತಿ ನೀಡಿ, ಅದಕ್ಕೆ ಏನು ವ್ಯವಸ್ಥೆ ಕಲ್ಪಿಸಬೇಕೋ ಈ ಬಗ್ಗೆ ಅಧ್ಯಯನ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.