ಮಂಗಳೂರು: “ಪವರ್ ಶೇರಿಂಗ್ ಬಗ್ಗೆ ನನಗೆ ಗೊತ್ತೇ ಇಲ್ಲ. ಅಲ್ಲಿ ಏನು ನಡೆಯುತ್ತದೆ ಎಂದು ನನಗೆ ಗೊತ್ತೇ ಇಲ್ಲ. ನೀವು ಹೇಳುವಾಗ್ಲೇ ಗೊತ್ತಾಗಿದ್ದು, ಸ್ಪೀಕರ್ ಆದ್ಮೇಲೆ ನನ್ನ ಪೊಲಿಟಿಕಲ್ ಚಾನಲ್ ಕ್ಲೋಸ್ಡ್, ಓನ್ಲಿ ಕಾನ್ಸ್ಟಿಟ್ಯೂಷನ್ ಚಾನಲ್ ಓಪನ್. ನನ್ನ ಸಬ್ಜೆಕ್ಟ್ ಆಚೆ ಇರುವ ವಿಚಾರ ಮಾತಾಡಲ್ಲ…”

ಡಿ.8ರಿಂದ ನಡೆಯಲಿರುವ ಬೆಳಗಾವಿ ಅಧಿವೇಶನದ ಕುರಿತು ಸ್ಪೀಕರ್ ಖಾದರ್ ಅವರು ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುವ ಸಂದರ್ಭ ಮಾಧ್ಯಮದವರು ʻಪವರ್ ಶೇರಿಂಗ್, ನವೆಂಬರ್ ಕ್ರಾಂತಿʼ ಬಗ್ಗೆ ಪ್ರಶ್ನಿಸಿದಾಗ ಖಾದರ್ ಈ ರೀತಿ ನಗುನಗುತ್ತಾ ಉತ್ತರಿಸಿದ್ದಾರೆ.

ಡಿಸೆಂಬರ್ 3ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಣಾಜೆಯ ವಿವಿ ಕ್ಯಾಂಪಸ್‌ನಲ್ಲಿ ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರು- ಮಹಾತ್ಮಾ ಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವ ಸಮ್ಮೇಳನ ಉದ್ಘಾಟಿಸಲು ಬರ್ತಾರೆ. ಡಿ.8ರಿಂದ ನಾನಿರಲಿ, ಸಭಾಪತಿ ಇರಲಿ ಬೆಳಗಾವಿಯಲ್ಲಿ ಅಧಿವೇಶನ ಅದರ ಪಾಡಿಗೆ ನಿಯಮಾನುಸಾರ ನಡೆಯುತ್ತದೆ. ಆಡಳಿತ ಪಕ್ಷ, ಪ್ರತಿಪಕ್ಷ. ಅಧಿಕಾರಿಗಳ ವರ್ಗಗಳ ಮೂಲಕ ಚರ್ಚೆ ತೀರ್ಮಾನ ಆಗುತ್ತದೆ. ಅಧಿವೇಶನದ ಮೇಲೆ ಯಾವುದೂ ಪರಿಣಾಮ ಬೀರುವುದಿಲ್ಲ ಎಂದು ಪವರ್ ಶೇರಿಂಗ್ ಕುರಿತಂತೆ ಮಾತನಾಡಲು ನಿರಾಕರಿಸಿ ನಗೆಯನ್ನಷ್ಟೇ ಬೀರಿದರು.
ಇದು ನಿಮ್ಮ ಕೊನೆಯ ಅಧಿವೇಶನವಾ? ನೀವು ಮಂತ್ರಿಯಾಗ್ತೀರಾ ಎಂದು ಮಾಧ್ಯಮದವರು ಕೇಳಿದಾಗ ಏನನ್ನೂ ಉತ್ತರಿಸಲಿಲ್ಲ. ಹಾಗಾದ್ರೆ ನಿಮ್ಗೆ ಮಂತ್ರಿ ಸ್ಥಾನ ಬೇಡ್ವಾ ಎಂದು ಕೇಳಿದಾಗ ಚೆಂಡು ಬಂದ್ರೆ ಬಿಡ್ಲಿಕ್ಕಾಗುತ್ತಾ? ಎಂದಷ್ಟೇ ಉತ್ತರಿಸಿದ್ದಾರೆ.
