ಮಂಗಳೂರು: ಶಿವಗಿರಿ ಮಠ ವವರ್ಕಲ, ಶ್ರೀ ನಾರಾಯಣ ಗುರು ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾನಿಯಲದ ಆಶ್ರಯದಲ್ಲಿ ʻಶತಮಾನದ ಮಹಾಪ್ರಸ್ಥಾನʼ ಗುರು- ಗಾಂಧಿ ಸಂವಾದ ಶತಮಾನೋತ್ಸವ ಡಿ.3ರಂದು ಬುಧವಾರ ಬೆಳಿಗ್ಗೆ 9.30ರಿಂದ ಕೋಣಾಜೆಯ ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ ನಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು.

ಮಂಗಳೂರಿನ ಸರ್ಕ್ಯೂಟ್‌ಹೌಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾತ್ಮಾ ಗಾಂಧಿ ಐತಿಹಾಸಿ ಸಂವಾದ ಶತಾಮಾನೋತ್ಸವ ಶ್ರೀ ಗುರುವಿನ ಮಹಾ ಸಮಾಧಿ ಶತಾಬ್ಧಿ ಸರ್ವಮತ ಸಮ್ಮೇಳನ ಶತಮಾನೋತ್ಸವ, ಯತಿ ಪೂಜೆಯೂ ಇದೇ ಸಂದರ್ಭದಲ್ಲಿ ಜರುಗಲಿದೆ ಎಂದರು.
ಬಿವಿ ಮೋಹನ್ ಅವರು ಸುಮಾರು 17 ವರ್ಷಗಳ ಹಿಂದೆ ಸಿಂಡಿಕೇಟ್ ಮೆಂಬರ್ ಆಗಿರುವ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಾರಾಯಣ ಗುರುಗಳ ಅಧ್ಯಯನ ಪೀಠವನ್ನು ಸ್ಥಾಪನೆ ಮಾಡ್ಬೇಕೆಂದು ಹೇಳಿ ಸಿಂಡಿಕೇಟ್‌ನಲ್ಲಿ ಒಂದು ರೆಸ್ಯೂಲೇಷನ್ ಪಾಸ್ ಮಾಡಿ, ನನ್ನತ್ರ ಬಂದರು. ರಾಜ್ಯಸಭಾ ಸದಸ್ಯರ ಸ್ಥಳೀಯ ಅನುದಾನದಿಂದ ಗರಿಷ್ಠ ೫೦ ಲಕ್ಷ ರೂ. ಅನುದಾನ ಪಡೆದುಕೊಂಡು ಪ್ರಾರಂಭ ಮಾಡಿದರು. ಇದಕ್ಕೆ ಆಗಿನ ಬಿಜೆಪಿ ಅಧ್ಯಕ್ಷರಾಗಿದ್ದಂತಹ ನಳಿನ್ ಕುಮಾರ್ ಕಟೀಲ್ ಹಾಗೂ ಹರೀಶ್ ಕುಮಾರ್ ಅವರು ತಲಾ 10-10 ಲಕ್ಷ ಕೊಟ್ಟಿದ್ದಾರೆ. ಹೀಗಾಗಿ ಒಂದು ಭಾಗವನ್ನು ಸಂಪೂರ್ಣ ಮಾಡಿದ್ದೇವೆ. ಅದನ್ನು ಸಂಪೂರ್ಣವಾಗಿ ಕಟ್ಟಲಿಕ್ಕೋಸ್ಕರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೂರು ಕೋಟಿ ಅನುದಾನ ಕೊಟ್ಟಿದ್ದಾರೆ. ಈಗ ಪೂರ್ಣ ಆಗಿರುವ ನಾರಾಯಣ ಗಹುರುಗಳ ಅಧ್ಯಯನ ಪೀಠದ ಒಂದು ಭಾಗವನ್ನು ಉದ್ಘಾಟನೆ ಮಾಡಿ, ಮತ್ತೊಂದು ಭಾಗಕ್ಕೆ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಡಿ.3ರಂದು ಮಾಡಲು ಒಪ್ಪಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಾವು ಮೂರು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶಿವಗಿರಿಗೆ ಭೇಟಿ ಮಾಡಿ ನಾರಾಯಣ ಗುರುಗಳ ಪರಿನಿರ್ವಾಣವಾದ ನೂರು ವರ್ಷ ತುಂಬಿದಾಗ ಗುರುಗಳು ಸಮಾಧಿ ಹೊಂದಿರುವ ಜಾಗದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಗಾಂಧಿ- ನಾರಾಯಣ ಗುರುಗಳ ಸಂವಾದದ ನೂರು ವರ್ಷಗಳ ಸಂವಾದಕ್ಕೆ ಚಾಲನೆ ಕೊಡಲಿದ್ದಾರೆ. ಸರ್ವಮತ ಸಮ್ಮೇಳನಕ್ಕೂ ನೂರು ವರ್ಷ ತುಂಬಲಿದ್ದು, ಸರ್ವಮತ ಸಮ್ಮೇಳನ ಶತಾಮಾನೋತ್ಸವವನ್ನೂ ಉದ್ಘಾಟನೆ ಆದ ನಂತರ ನಡೆಯಲಿದೆ.
ಐನ್ಸ್ಟೀನ್ ಅವರು ಪ್ರಪಂಚಕ್ಕೆ ಬಾಂಬ್ ಕೊಟ್ರು. ನಾರಾಯಣ ಗುರುಗಳು ಅಸ್ಪೃಷ್ಯತೆಯ ವಿರುದ್ಧ ಹೋರಾಟ ಮಾಡಿದರು. ಸರ್ವಧರ್ಮ ಸಮಭಾವಕ್ಕಾಗಿ ಗಾಂಧಿ ಅಹಿಂಸಾತ್ಮಕ ಹೋರಾಟ ಮಾಡಿದ್ದರು. ಈ ಮೂವರು ವ್ಯಕ್ತಿಗಳು ಶತಮಾನದ ಅದ್ಭುತ ಅಂತ ಹೇಳಿದ್ರೂ ತಪ್ಪಾಗ್ಲಿಕ್ಕಿಲ್ಲ ಎಂದು ಹರಿಪ್ರಸಾದ್ ಹೇಳಿದರು.
ಐನ್ಸ್ಟೀನ್ ಮಾತಾಡುವ ಸಂದರ್ಭದಲ್ಲಿ ಈ ಕಾಲಘಟ್ಟದಲ್ಲಿ ಎಲುಬು ಹಾಗೂ ರಕ್ತ ಇದ್ದಂತಹ ಸಣ್ಣ ವ್ಯಕ್ತಿ ಈ ಭೂಮಂಡಲದಲ್ಲಿ ಓಡಾಡ್ತಾ ಇದ್ದ ಎಂದ್ರೆ ಮುಂದಿನ ಪೀಳಿಗೆ ನಂಬಲು ಸಾಧ್ಯವಿಲ್ಲ ಎಂದು ಗಾಂಧಿಯವರನ್ನುದ್ದೇಶಿಸಿ ಹೇಳಿದ್ದರು.1924ರಲ್ಲಿ ಅವರು ನಾರಾಯಣ ಗುರುಗಳನ್ನು ಭೇಟಿ ಮಾಡುವ ಸಂದರ್ಭದಲ್ಲಿ ನಾರಾಯಣ ಗುರುಗಳ ಅಸ್ರೃಷ್ಯತೆಯ ವಿರುದ್ಧದ ಹೋರಾಟವನ್ನು ಕಂಡು ಪ್ರಶಂಸೆ ವ್ಯಕ್ತಪಡಿಸಿದ್ದರು. ಇದರಿಂದ ಪ್ರೇರಿತರಾದ ಗಾಂಧಿ ಯಂಗ್ ಇಂಡಿಯಾ ಹಾಗೂ ಹರಿಜನ ಎಂಬ ಪತ್ರಿಕೆಯನ್ನು ಆರಂಭಿಸಿ ಇಡೀ ದೇಶದಲ್ಲಿ ಅಸ್ಪೃಷ್ಯತೆಯ ವಿರುದ್ಧ ಹೋರಾಟ ಮಾಡಿದ್ದರು ಎಂದು ಸ್ಮರಿಸಿದರು.

ಮಹತ್ಮಾಗಾಂಧಿಯವರ ವಿಗ್ರಹವನ್ನು ಪೂಜೆ ಮಾಡುವ ಸ್ಥಳ ಇದ್ದರೆ ಅದು ಕಂಕನಾಡಿಯ ಗರಡಿ ಮಾತ್ರ. ಇದರೊಂದಿಗೆ ನಾರಾಯಣ ಗುರುಗಳ ವಿಗ್ರಹಕ್ಕೂ ಪೂಜೆ ನಡೆಯುತ್ತಿದೆ. ಸರ್ವ ಧರ್ಮ ಸಹಭಾವ, ಸಹಬಾಳ್ವೆ, ಸೌಹಾರ್ದತೆಯ ಸದುದ್ದೇಶದದಿಂದ ಎಲ್ಲರೂ ಚಿಂತನೆಯನ್ನು ಮಾಡಿ ಶಿವಗಿರಿ ಮಠದ ಶ್ರೀ ಜ್ಞಾನ ತೀರ್ಥ ಸರಸ್ವತಿ ಸ್ವಾಮೀಜಿ, ಸಚ್ಚಿದಾನಂದ ಸ್ವಾಮೀಜಿ ಸಹಕಾರದಿಂದ ಕೋಣಾಜೆಯ ಮಂಗಳೂರು ವಿವಿ ಕ್ಯಾಂಪಸ್‌ನಲ್ಲಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು. ಪೂರ್ವಸಿದ್ಧತೆಗಾಗಿ ಮಂಗಳೂರಿಗೆ ಬಂದಿದ್ದೇನೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಂಘಟನಾ ಸಮಿತಿ ರಕ್ಷಣಾಧಿಕಾರಿ ಕೇರಳದ ಶಿವಗಿರಿ ಪೀಠದ ಶ್ರೀ ಜ್ಞಾನ ತೀರ್ಥ ಸ್ವಾಮೀಜಿ, ಕುದ್ರೋಳಿ ಕ್ಷೇತ್ರದ ಅಧ್ಯಕ್ಷರಾದ ಜಯರಾಜ್ ಸೋಮಸುಂದರಂ, ಅಖಿಲ ಭಾರತ ಬಿಲ್ಲವ ಯೂನಿಯನ್‌ನ ಅಧ್ಯಕ್ಷ ನವೀನ ಚಂದ್ರ ಡಿ ಸುವರ್ಣ, ಭಾರತ್ ಬ್ಯಾಂಕ್, ಮಹಾ ಮಂಡಲದ ಅಧ್ಯಕ್ಷ ಸೂರ್ಯಕಾಂತ್ ಸುವರ್ಣ, ಗೋಕರ್ಣ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ ಹಾಗೂ ರಕ್ಷಿತ್ ಸುವರ್ಣ ಇದ್ದರು. ಬಿವಿ ಮೋಹನ್ ಸ್ವಾಗತಿಸಿದರು.