ಸ್ಟಾರ್ ಮಾಡೆಲ್ ಜೊತೆ ಹಾರ್ದಿಕ್ ಪಾಂಡ್ಯ ನಿಶ್ಚಿತಾರ್ಥ?!

ಬೆಂಗಳೂರು: ಇದೀಗ ಭಾರತೀಯ ಕ್ರಿಕೆಟ್ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ನಿಶ್ಚಿತಾರ್ಥದ ವದಂತಿಗಳು ಎಲ್ಲೆಡೆ  ಹರಿದಾಡುತ್ತಿದ್ದು, ಈ ಬೆನ್ನಲ್ಲೇ  ಹಾರ್ದಿಕ್ ಇತ್ತೀಚೆಗೆ ತಮ್ಮ ಹೊಸ ಗೆಳತಿ ಮಹಿಕಾ ಶರ್ಮಾ ಅವರೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಮಹಿಕಾ ಅವರ ಕೈಯಲ್ಲಿರುವ ವಜ್ರದ ಉಂಗುರವನ್ನು ಕಂಡಂತಹ ನೆಟ್ಟಿಗರು ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದೆನಿಸಿಕೊಳ್ಳುತ್ತಿದ್ದಾರೆ . ಫೋಟೋಗಳಲ್ಲಿ, ಹಾರ್ದಿಕ್ ಮತ್ತು ಮಹಿಕಾ ಸಾಂಪ್ರದಾಯಿಕ ಉಡುಪನ್ನು ಧರಿಸಿ ತುಂಬಾ ಹತ್ತಿರದಲ್ಲಿ ಜೊತೆ ಜೊತೆಯಾಗಿ ನಿಂತಿದ್ದಾರೆ. ಎಲ್ಲರ ಕಣ್ಣುಗಳು ಮಹಿಕಾ ಬೆರಳಿನಲ್ಲಿದ್ದ ಹೊಳೆಯುವ ಉಂಗುರದ ಮೇಲೆ ಇದ್ದವು. ಹಾರ್ದಿಕ್ ಅವರ ಫಾಲೋವರ್ಸ್ ಈ ಪೋಸ್ಟ್ ಕಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ.

ಹಾರ್ದಿಕ್ ಈ ವರ್ಷ ತಮ್ಮ ಹುಟ್ಟುಹಬ್ಬದಂದು ಮಹಿಕಾ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದಾರೆ.

error: Content is protected !!