ಸ್ಥಿರತೆ ಆಧಾರಿತ ಪರಿಹಾರಗಳ ರಾಷ್ಟ್ರೀಯ ಹ್ಯಾಕಥಾನ್: ಗ್ರ್ಯಾಂಡ್ ಫಿನಾಲೆ 2025

ಬೆಂಗಳೂರು: ಸೆಂಟ್ ಜೋಸೆಫ್ ವಿಶ್ವವಿದ್ಯಾಲಯದ ಕ್ಷೇವಿಯರ್ ಹಾಲ್‌ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್‌ನಲ್ಲಿ ದೇಶದ ವಿವಿಧ ರಾಜ್ಯಗಳಿಂದ 35 ಕಾಲೇಜುಗಳ 60 ತಂಡಗಳು ಭಾಗವಹಿಸಿದವು. ಪೂರ್ವ ಸುತ್ತುಗಳ ನಂತರ 11 ತಂಡಗಳು ಗ್ರ್ಯಾಂಡ್ ಫಿನಾಲೆಗಾಗಿ ಆಯ್ಕೆಯಾದವು.

ಕಾರ್ಯಕ್ರಮವು ಪ್ರಾರ್ಥನೆಯಿಂದ ಆರಂಭವಾಗಿ, IIC ಅಧ್ಯಕ್ಷರಾದ ಡಾ. ಶಿವಕಣ್ಣನ್ ಎಸ್ ಅವರ ಸ್ವಾಗತ ಭಾಷಣ ಮತ್ತು ಪ್ರೋ ವೈಸ್ ಚಾನ್ಸಲರ್ ಡಾ. ರೆಜಿನಾ ಮಾಥಿಯಾಸ್ ಅವರ ಸಂದೇಶದೊಂದಿಗೆ ಮುಂದುವರೆಯಿತು. ವಿದ್ಯಾರ್ಥಿಗಳು ಕೃಷಿ, ಸಮುದಾಯ ಜೀವನೋಪಾಯ, ಕಾರ್ಬನ್ ಹೊರಸೂಸುವಿಕೆ, ಕಸದ ನಿರ್ವಹಣೆ, ಪ್ರವಾಸೋದ್ಯಮ, ಲಾಜಿಸ್ಟಿಕ್ಸ್, ನೀರು ಶುದ್ಧೀಕರಣ ಮತ್ತು ಆರೋಗ್ಯ ಮುಂತಾದ ವಿಷಯಗಳಲ್ಲಿ ನವೀನ ಪರಿಹಾರಗಳನ್ನು ಪ್ರಸ್ತುತಪಡಿಸಿದರು.

ಕು. ನಿಶಾ ನಿನನ್ ಅವರು ಹ್ಯಾಕಥಾನ್ ನಂತರ ವರ್ಕ್‌ಶಾಪ್ ನಡೆಸಿ, ಪ್ರೊ. ಇಸಾಬೆಲ್ ರಿಮನೋಸ್ಝಿ ಅವರು ಪರಿಸರ ದೃಷ್ಟಿಕೋನ, ವ್ಯವಸ್ಥಾತ್ಮಕ ಚಿಂತನೆ, ಭಾವನಾತ್ಮಕ ಬುದ್ಧಿಮತ್ತೆ ಮತ್ತು ಆಧ್ಯಾತ್ಮಿಕ ಬುದ್ಧಿಮತ್ತೆ ಎಂಬ ನಾಲ್ಕು ಅಂಶಗಳ ಮೇಲೆ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು.

Thoughtworks, Accacia, Kazam, Bisleri, Beautiful Bharat, Waste Impact Trust, Vertex Ventures, Infoedge, Aline Partners, ISDM ಮತ್ತು ಹಲವು ಸಂಸ್ಥೆಗಳ ಮಾರ್ಗದರ್ಶಕರು ಮತ್ತು ತಜ್ಞರು ಕಾರ್ಯಕ್ರಮಕ್ಕೆ ಬೆಂಬಲ ನೀಡಿದರು. ನ್ಯಾಯಮಂಡಳಿಯಾಗಿ ಮಾರಿಸ್ ಚಾಕೊ, ಜೇಕಬ್ ಜಾನ್, ಅಕ್ಷಯ್ ಸೋನಿ, ದಿನೇಶ್ ರಾಮ್ ಮತ್ತು ಡಾ. ಶ್ರೀನಾಥ್ ಅವರು ತಂಡಗಳನ್ನು ಮೌಲ್ಯಮಾಪನ ಮಾಡಿದರು.

ಪ್ರಥಮ ಸ್ಥಾನವನ್ನುಎಂ.ಎಸ್. ರಾಮಯ್ಯದ ‘ಗ್ರೀನ್ ಗಾರ್ಡಿಯನ್ಸ್’, ದ್ವಿತೀಯ ಸ್ಥಾನವನ್ನು ಪಿ.ಇ.ಎಸ್. ಯುನಿವರ್ಸಿಟಿ ‘ಕಲಾಕಾರ್’, ತೃತೀಯ ಸ್ಥಾನವನ್ನು ಸೈಂಟ್ ಜೋಸೆಫ್ಸ್ ಯೂನಿವರ್ಸಿಟಿಯ ‘ಕಾಲ್ಡೆರಾ’ ಪಡೆದವು.

ಸಮಾಪ್ತ ಸಮಾರಂಭದಲ್ಲಿ ರೆ. ಫಾ. ಡೆನ್ಸಿಲ್ ಲೋಬೊ, ಎಸ್.ಜೆ. ಇವರು ಹ್ಯಾಕಥಾನ್ ಮತ್ತು ನವೀನತೆಯ ಮಹತ್ವದ ಬಗ್ಗೆ ಪ್ರೇರಣಾದಾಯಕ ಮಾತು ಹೇಳಿದರು. ಕೊನೆಯಲ್ಲಿ ಪ್ರಶಸ್ತಿ ವಿತರಣೆ ಮತ್ತು ನಂತರ ಕು. ಕೊಧಾಯ್ ನಾರಾಯಣನ್ ಅವರ ಕೃತಜ್ಞತಾ ಭಾಷಣದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಅವರು ಡಾ. ಪ್ರಮೋದ್ ಕೆ.ಎಂ., ಶ್ರೀ ವೇಣುಗೋಪಾಲ್, ಡಾ. ಹರಿಹರನ್, ಕು. ನಿಶಾ ನಿನನ್ ಮತ್ತು ಎಲ್ಲ IIC ಸದಸ್ಯರ ಸಹಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.

error: Content is protected !!