ಟೆಲ್ ಅವೀವ್: ಹಮಾಸ್ ಉಗ್ರ ಸಂಘಟನೆ ವಿರುದ್ಧದ ಇಸ್ರೇಲ್ ಸೇನೆಯ ದಾಳಿಯ ಮುಂದುವರೆದಿದ್ದು ಹಮಾಸ್ ನಿರ್ಮಿಸಿಕೊಂಡಿದ್ದ ಮತ್ತೊಂದು ಭೂಗತ ಕಾಂಪ್ಲೆಕ್ಸ್ ಅನ್ನು ಇಸ್ರೇಲ್ ಸೇನೆ ಪತ್ತೆ ಮಾಡಿದೆ.

ಹೌದು.. ಇತ್ತೀಚೆಗೆ ಭಯೋತ್ಪಾದಕ ಗುಂಪು ಹಮಾಸ್ ಇಸ್ರೇಲ್ ನ ಲೆಫ್ಟಿನೆಂಟ್ ಹದರ್ ಗೋಲ್ಡಿನ್ ಅವರ ದೇಹವನ್ನು ಇಟ್ಟುಕೊಂಡಿದ್ದ ಗಾಜಾ ಪಟ್ಟಿಯಲ್ಲಿ ಹಮಾಸ್‌ನ ಪ್ರಮುಖ ಸುರಂಗವನ್ನು ಇಸ್ರೇಲ್ ರಕ್ಷಣಾ ಪಡೆಗಳು (IDF) ಪತ್ತೆಹಚ್ಚಿವೆ.

2014 ರ ಇಸ್ರೇಲ್-ಹಮಾಸ್ ಯುದ್ಧದ ಸಮಯದಲ್ಲಿ ಗಾಜಾದಲ್ಲಿ ಹೊಂಚುದಾಳಿಯ ಸಮಯದಲ್ಲಿ ಲೆಫ್ಟಿನೆಂಟ್ ಗೋಲ್ಡಿನ್ ಕೊಲ್ಲಲ್ಪಟ್ಟಿದ್ದರು. ಈ ತಿಂಗಳ ಆರಂಭದಲ್ಲಿ, ಇಸ್ರೇಲ್ ಅವರ ದೇಹವನ್ನು ವಶಕ್ಕೆ ಪಡೆದಿತ್ತು.

ಇದೀಗ ಅವರ ದೇಹವನ್ನು ಅಡಗಿಸಿಡಲಾಗಿದ್ದ ಭೂಗತ ಲೋಕವನ್ನು ಇಸ್ರೇಲ್ ಪತ್ತೆ ಮಾಡಿದೆ. ಈ ಕುರಿತು X ನಲ್ಲಿ ಪೋಸ್ಟ್ ಮಾಡಿರುವ IDF ಗೋಲ್ಡಿನ್ ಅವರ ಶವವನ್ನು ಇರಿಸಲಾಗಿದ್ದ ಸುರಂಗದ ವೀಡಿಯೊವನ್ನು ಹಂಚಿಕೊಂಡಿದೆ. ಸುರಂಗವು ಜನನಿಬಿಡ ರಫಾ ಗಡಿ ಪ್ರದೇಶದ ಸಮೀಪದ UNRWA (ಪ್ಯಾಲೆಸ್ಟಿನಿಯನ್ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಸಂಸ್ಥೆ) ಕಾಂಪೌಂಡ್ ಕೆಳಗೆ ನಿರ್ಮಿಸಲ್ಪಟ್ಟಿದೆ.

ಈ ಬೃಹತ್ ಸುರಂಗ ಕಾಂಪ್ಲೆಕ್ಸ್ 7 ಕಿ.ಮೀ ಉದ್ದವಿದ್ದು, 25 ಮೀಟರ್ ಆಳವಾಗಿದೆ. ಇಲ್ಲಿ ಬರೊಬ್ಬರಿ 80 ಕೊಠಡಿಗಳನ್ನು ನಿರ್ಮಿಸಲಾಗಿತ್ತು. ಈ ಕಾಂಪ್ಲೆಕ್ಸ್ ಮೇಲೆ ಮಸೀದಿಗಳು, ಚಿಕಿತ್ಸಾಲಯಗಳು ಮತ್ತು ಕಿಂಡರ್‌ಗಾರ್ಟನ್‌ಗಳು ನಿರ್ಮಾಣವಾಗಿದ್ದವು ಎಂದು IDF ಹೇಳಿದೆ.

ಈ ಸುರಂಗವನ್ನು ಹಮಾಸ್ ಕಮಾಂಡರ್‌ಗಳು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು, ದಾಳಿಗಳನ್ನು ಯೋಜಿಸಲು ಮತ್ತು ವಾಸ್ತವ್ಯವನ್ನು ವಿಸ್ತರಿಸಲು ಬಳಸುತ್ತಿದ್ದರು ಎಂದು ಹೇಳಲಾಗಿದೆ.

ಸುರಂಗವು. ಏಳು ಕಿಲೋಮೀಟರ್‌ಗಳಿಗಿಂತ ಹೆಚ್ಚು ಉದ್ದವಾಗಿದ್ದು, 25 ಮೀಟರ್ ಆಳವಾಗಿದೆ ಮತ್ತು 80 ಕೊಠಡಿಗಳನ್ನು ಹೊಂದಿದೆ ಎಂದು IDF ಹೇಳಿದೆ. ಈ ಸುರಂಗವನ್ನುಇಸ್ರೇಲ್ ನ ಎಲೈಟ್ ಯಹಲೋಮ್ ಯುದ್ಧ ಎಂಜಿನಿಯರಿಂಗ್ ಘಟಕ ಮತ್ತು ಶಾಯೆಟೆಟ್ 13 ನೌಕಾ ಕಮಾಂಡೋ ಘಟಕವು ಪತ್ತೆಹಚ್ಚಿದೆ

ಮೇ ತಿಂಗಳಲ್ಲಿ ಹಮಾಸ್ ನಾಯಕ ಮೊಹಮ್ಮದ್ ಸಿನ್ವರ್ ಜೊತೆಗೆ ಕೊಲ್ಲಲ್ಪಟ್ಟ ಮುಹಮ್ಮದ್ ಶಬಾನಾ ಸೇರಿದಂತೆ ಹಿರಿಯ ಹಮಾಸ್ ಕಮಾಂಡರ್‌ಗಳು ಕಮಾಂಡ್ ಪೋಸ್ಟ್‌ಗಳಾಗಿ ಬಳಸುತ್ತಿದ್ದ ಕೊಠಡಿಗಳನ್ನು ಕೂಡ ಇಸ್ರೇಲ್ ಮಿಲಿಟರಿ ಕಂಡುಹಿಡಿದಿದೆ ಎಂದು ಹೇಳಲಾಗಿದೆ.