ಮಂಗಳೂರು: ಕೊಟ್ಟಾರ ಚೌಕಿಯ ಭಂಡಾರಿ ಬಿಲ್ಡರ್ಸ್ ವಸತಿ ಸಮುಚ್ಛಯದ ಬಳಿಯ ಮುಖ್ಯ ರಸ್ತೆಯಲ್ಲಿ ಕಿತ್ತುಹೋದ ಹಂಪ್ಸ್ ಇದೀಗ ಅಪಘಾತದ “ಹಾಟ್‌ಸ್ಪಾಟ್” ಆಗಿದೆ. ಇಂದು ಬೆಳಿಗ್ಗೆ ಬೈಕ್ ಸವಾರನು ಹಂಪ್ಸ್ ಕಾಣದಂತೆ ಬಿದ್ದು ಗಾಯಗೊಂಡ ಘಟನೆ ನಡೆದಿದ್ದು, ಇದೇ ರೀತಿ ಪ್ರತಿ ದಿನ ಒಂದಲ್ಲ ಒಂದು ರೀತಿ ಅಪಘಾತ ಸಂಭವಿಸುತ್ತಲೇ ಇದೆ.




.

ಈ ಹಂಪ್ಸ್ ಅನೇಕ ದಿನಗಳಿಂದಲೇ ಕಿತ್ತು ಹೋಗಿ ಅಪಾಯಕಾರಿಯಾಗಿ ಬಿಟ್ಟುಹೋಗಿದ್ದರೂ, ಮಹಾನಗರ ಪಾಲಿಕೆ ಇದುವರೆಗೆ ಏನೂ ಮಾಡಿಲ್ಲ ಎಂಬುವುದು ಸಾರ್ವಜನಿಕರ ಆರೋಪವಾಗಿದೆ. “ನೂರಾರು ವಾಹನಗಳು ಓಡುವ ರಸ್ತೆ ಇದು. ಸಮಸ್ಯೆ ಯನ್ನು ಹೇಳೋರು ಇಲ್ಲ, ಕೇಳೋರು ಇಲ್ಲ!” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿನವೂ ನೂರಾರು ವಾಹನಗಳು ಸಂಚರಿಸುವ ಮುಖ್ಯರಸ್ತೆ, ಇದಾಗಿದ್ದು, ಆದರೆ ಹಂಪ್ಸ್ ದುರಸ್ತಿ ಬಗ್ಗೆ ಯಾರೂ ಕೂಡ ಇದುವರೆಗೆ ಕ್ರಮ ಕೈಗೊಂಡಿಲ್ಲ. ರಾತ್ರಿ ಸಮಯದಲ್ಲಿ ಹಂಪ್ಸ್ ಸ್ಪಷ್ಟವಾಗಿ ಕಾಣದೆ ಅಪಘಾತ ಸಂಭವಿಸುವ ಸಂಭವ ಹೆಚ್ಚು. ವರ್ಷಧಾರೆ, ವಾಹನಗಳ ಓಡಾಟದ ಭರಾಟೆಯಿಂದ ಹಂಪ್ಸ್ ಅರ್ಧ ಕಿತ್ತುಹೋಗಿದ್ದು “ಅಪಘಾತದ ಬಲೆ” ಆಗಿ ಬದಲಾಗಿದೆ.
ಹತ್ತಿರದಲ್ಲಿ ವಸತಿ ಸಮುಚ್ಛಯ, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಸಂಚರಿಸುವ ಪ್ರದೇಶವಾಗಿದ್ದು, ಇನ್ನೂ ಅಪಾಯಕಾರಿಯಾಗಿ ಪರಿಣಮಿಸಿದೆ. ಸ್ಥಳೀಯರು ಹಲವು ಬಾರಿ ಮಾಹಿತಿ ನೀಡಿದ್ದರೂ, ಪಾಲಿಕೆ ಅಧಿಕಾರಿಗಳ “ಕಿವಿಗೊಡದ” ಮನೋಭಾವ ಜನರಲ್ಲಿ ಅಸಹನೆಯ ಹುಟ್ಟಿಸಿದೆ.
ಸ್ಥಳೀಯರು ಪಾಲಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
